ಶ್ವೇತಭವನದಲ್ಲಿ ದೀಪಾವಳಿ: ಡೊನಾಲ್ಡ್‌ ಟ್ರಂಪ್‌ ಚಾಲನೆ

7

ಶ್ವೇತಭವನದಲ್ಲಿ ದೀಪಾವಳಿ: ಡೊನಾಲ್ಡ್‌ ಟ್ರಂಪ್‌ ಚಾಲನೆ

Published:
Updated:

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದದಲ್ಲಿ ದೀಪ ಬೆಳಗಿಸುವ ಮೂಲಕ ದೀಪಾವಳಿ ಸಂಭ್ರಮಾಚರಣೆಗೆ ಮಂಗಳವಾರ ವಿಧ್ಯುಕ್ತ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಈ ದಿನ ದೀಪಾವಳಿ ಆಚರಣೆಗಾಗಿ ಎಲ್ಲರೂ ಸೇರಿದ್ದೇವೆ. ಇದರ ಮೂಲಕ ಹೊಸ ದಿನಗಳನ್ನು ಬರಮಾಡಿಕೊಳ್ಳಲು ಲಕ್ಷಾಂತರ ಜನರು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಒಟ್ಟಾಗಿದ್ದೇವೆ’ ಎಂದು ಹೇಳಿದರು.

ದೀಪಾವಳಿ ಆಚರಣೆ ಸಂಬಂಧ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು, ‘ಹಿಂದೂಗಳ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ರೂಸ್‌ವೆಲ್ಟ್‌ ಕೊಠಡಿಯಲ್ಲಿ ಇಂದು(ಮಂಗಳವಾರ) ಮಧ್ಯಾಹ್ನ ಆತಿಥ್ಯ ವಹಿಸಿದ್ದು ನನಗೆ ಅತ್ಯಂತ ಗೌರವದ ಸಂಗತಿಯಾಗಿತ್ತು’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !