ಮಂಗಳವಾರ, ಜನವರಿ 28, 2020
29 °C

‘ಡೆಮಾಕ್ರಟಿಕ್‌ ಪಕ್ಷ ಇರಾನ್‌ ಕೈಗೊಂಬೆ’: ಡೊನಾಲ್ಡ್ ಟ್ರಂಪ್‌ ರಿಟ್ವೀಟ್

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ : ‘ಡೆಮಾಕ್ರಟಿಕ್‌ ಪಕ್ಷದ ಸದಸ್ಯರು ಇರಾನಿನ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ಮುಸ್ಲಿಂ ಸಮುದಾಯದ ಉಡುಪು ತೊಟ್ಟಿರುವ ಪಕ್ಷದ ಇಬ್ಬರು ಸದಸ್ಯರ ನಕಲಿ ಚಿತ್ರವನ್ನು ರಿಟ್ವೀಟ್‌ ಮಾಡಿದ್ದಾರೆ. 

ಸಂಸತ್ತಿನ ಡೆಮಾಕ್ರಟಿಕ್ ಪಕ್ಷದ ಮುಖಂಡರಾದ ಚಕ್‌ ಶುಮರ್‌ ಮತ್ತು ಸಂಸತ್‌ ಸಭಾಧ್ಯಕ್ಷೆ ನ್ಯಾನ್ಸಿ ಪೆಲೊಸಿ ವಿರುದ್ಧ ಟ್ರಂಪ್‌ ಟೀಕಾ ಪ್ರಹಾರ ನಡೆಸಿದ್ದಾರೆ. ಇವರಿಬ್ಬರು ಇರಾನ್‌ನ ಸೇನೆಯ ರೆವಲ್ಯೂಷನ್ ಗಾರ್ಡ್‌ ಪಡೆಯ ಮುಖ್ಯಸ್ಥ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಹತ್ಯೆಯನ್ನು ಟೀಕಿಸಿದ್ದರು. 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು