ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್‌ ಟ್ರಂಪ್‌ ತಪ್ಪು ಎಸಗಿಲ್ಲ: ವಕೀಲರ ವಾದ

Last Updated 26 ಜನವರಿ 2020, 18:41 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಉಕ್ರೇನ್‌ ಜೊತೆಗೆ ವ್ಯವಹರಿಸುವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯಾವುದೇ ತಪ್ಪು ಎಸಗಿಲ್ಲ’ ಎಂದು ಶ್ವೇತಭವನದ ವಕೀಲರು ಸೆನೆಟ್ ಎದುರು ಪ್ರತಿಪಾದಿಸಿದ್ದಾರೆ.

ವಾಗ್ದಂಡನೆ ಪ್ರಕರಣದಲ್ಲಿ ಸೆನೆಟ್‌ನ ವಿಚಾರಣೆ ಸಮಿತಿಯ ಎದುರು ವಾದ ಮಂಡಿಸಿದ ವಕೀಲರು, ‘ಟ್ರಂಪ್‌ ಅಧಿಕಾರದಲ್ಲಿರಬೇಕೇ, ಬೇಡವೇ ಎಂಬುದನ್ನು ದೇಶದ ಮತದಾರರು ನಿರ್ಧರಿಸಬೇಕಿದೆ’ ಎಂದು ವಾದಿಸಿದರು.

ಶ್ವೇತಭವನದ ವಕೀಲ ಪ್ಯಾಟ್‌ ಸಿಪೊಲ್ಲೊನ್, ‘ಸಂಸತ್ತಿನ ಜನಪ್ರತಿನಿಧಿಗಳ ಸಭೆಯಂತೇ ಸೆನೆಟ್‌ ಕೂಡಾ ಅಧ್ಯಕ್ಷರ ಪದಚ್ಯುತಿ ಪರ ಮತಚಲಾಯಿಸಿದರೆ ಅದು ‘ಅಧಿಕಾರದ ಪೂರ್ಣ ದುರ್ಬಳಕೆ ಆಗಲಿದೆ’ ಎಂದರು.

‘ಸೆನೆಟ್ ಹಿಂದೆಂದೂ ಮಾಡಿರದಂತಹ ಕಾರ್ಯವನ್ನು ಈಗ ಮಾಡಬೇಕು ಎಂದು ಅವರು ಬಯಸುತ್ತಿದ್ದಾರೆ’ ಎಂದು ಸೆನೆಟ್‌ನ 100 ಸದಸ್ಯರಿದ್ದ ಸಭೆಯನ್ನು ಉದ್ದೇಶಿಸಿ ಹೇಳಿದರು.

ಅಮೆರಿಕದ ಇತಿಹಾಸದಲ್ಲಿಯೇ ಅಧ್ಯಕ್ಷರ ವಿರುದ್ಧದ ವಾಗ್ದಂಡನೆ ಆರೋಪ ವಿಚಾರಣೆ ಕುರಿತ ಮೂರನೇ ಪ್ರಕರಣ

ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT