ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಟನ್‌ ಉಪಗ್ರಹಕ್ಕೆ ಡ್ರೋನ್‌: ನಾಸಾ

ಜೀವಿಗಳ ವಾಸಿಸುವ ವಾತಾವರಣ ಕುರಿತು ಅಧ್ಯಯನ
Last Updated 28 ಜೂನ್ 2019, 19:17 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಶನಿ ಉಪಗ್ರಹವಾದ ಟೈಟನ್‌ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಲು ‘ಡ್ರ್ಯಾಗನ್‌ಫ್ಲೈ’ ಎನ್ನುವ ಡ್ರೋನ್‌ ಕಳುಹಿಸುವುದಾಗಿ ನಾಸಾ ತಿಳಿಸಿದೆ.

ಸೌರಮಂಡಲದಲ್ಲಿ ಶನಿ ಎರಡನೇ ಅತಿ ದೊಡ್ಡ ಗ್ರಹ. ಟೈಟನ್‌ನಲ್ಲಿ ಸೂಕ್ಷ್ಮ ಜೀವಿಗಳ ವಾಸಕ್ಕೆ ಅನುಕೂಲಕರ ವಾತಾವರಣವಿದೆಯೇ ಎನ್ನುವ ಬಗ್ಗೆ ಅಧ್ಯಯನ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬ್ಲೇಡ್‌ಗಳನ್ನು ಹೊಂದಿರುವ ಯಾಂತ್ರಿಕ ಉಪಕರಣದ ಮೂಲಕ ಡ್ರೋನ್‌ ಹಾರಾಟ ನಡೆಸಲಿದೆ. ಹಾಲಿ ಜಾರಿಯಲ್ಲಿರುವ ಹಲವು ಯೋಜನೆಗಳಿಗಿಂತಲೂ ‘ಡ್ರ್ಯಾಗನ್‌ಫ್ಲೈ’ ಉಡಾವಣೆಗೆ ಆದ್ಯತೆ ನೀಡಲು ನಾಸಾ ಮುಂದಾಗಿದೆ.

2026ರಲ್ಲಿ ಈ ಡ್ರೋನ್‌ ಉಡಾವಣೆಯಾಗಲಿದ್ದು, 2034ಕ್ಕೆ ಟೈಟನ್‌ನಲ್ಲಿ ತಲುಪಿ ಅಧ್ಯಯನ ಕೈಗೊಳ್ಳಲಿದೆ. ಈ ಯೋಜನೆಗೆ 850 ದಶಲಕ್ಷ ಡಾಲರ್‌ (₹5864.74 ಕೋಟಿ) ವೆಚ್ಚವಾಗಲಿದೆ ಎಂದು ನಾಸಾ ಪ್ರಕಟಣೆ ತಿಳಿಸಿದೆ.

‘ಟೈಟನ್‌ನಲ್ಲಿ ಜೀವಿಗಳಿಗೆ ಅಗತ್ಯವಿರುವ ಎಲ್ಲ ಅಂಶಗಳಿವೆ. ಹೀಗಾಗಿ, ಈ ಯೋಜನೆ ಕುತೂಹಲ ಮೂಡಿಸಿದೆ’ ಎಂದು ನಾಸಾ ನಿರ್ದೇಶಕ ಲೋರಿ ಗ್ಲೇಜ್‌ ತಿಳಿಸಿದ್ದಾರೆ.

‘ಟೈಟನ್‌ ಉಪಗ್ರಹದಲ್ಲಿ ಮಿಥೇನ್‌, ಮಂಜುಗಡ್ಡೆಗಳಿವೆ. ಹೀಗಾಗಿ, ಇಲ್ಲಿ ಜೀವಿಗಳು ವಾಸಿಸಲು ಸಾಧ್ಯವೇ ಎನ್ನುವ ಬಗ್ಗೆ ಅಧ್ಯಯನ ನಡೆಸಲು ಸೂಕ್ತವಾಗಿದೆ’ ಎಂದು ಯೋಜನೆಯ ಮುಖ್ಯಸ್ಥ ಎಲಿಜೆಬೆತ್‌ ಟರ್ಟಲ್‌ ತಿಳಿಸಿದ್ದಾರೆ. 2017ರಲ್ಲಿ ಕ್ಯಾಸಿನಿ ಗಗನನೌಕೆಯನ್ನು ಶನಿ ಗ್ರಹದ ಬಗ್ಗೆ ಅಧ್ಯಯನ ನಡೆಸಲು ಉಡಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT