ಶುಕ್ರವಾರ, ಆಗಸ್ಟ್ 23, 2019
26 °C

11 ಮಾದಕ ದ್ರವ್ಯ ಸಾಗಾಣಿಕೆದಾರರಲ್ಲಿ ಭಾರತದ ವ್ಯಕ್ತಿ

Published:
Updated:

ಲಂಡನ್‌: ಮಾದಕ ದ್ರವ್ಯ ಸಾಗಾಣಿಕೆ ಪ್ರಕರಣದಲ್ಲಿ ಬ್ರಿಟನ್‌ಗೆ ಬೇಕಾಗಿರುವ 11 ಆರೋಪಿಗಳ ಪಟ್ಟಿಯಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬ ಸೇರಿದ್ದಾನೆ. ಇವರ ಪತ್ತೆಗೆ ನೆರವಾಗುವಂತೆ ಪೊಲೀಸರು ಸಾರ್ವಜನಿಕರ ನೆರವು ಕೋರಿದ್ದಾರೆ.

2007ರಲ್ಲಿ ಶಶಿಧರ್‌ ಸಹ್ನಾನ್‌ (61) ಬ್ರಿಟನ್‌ಗೆ ಮಾದಕ ದ್ರವ್ಯಗಳನ್ನು ಆಮದು ಮಾಡಿಕೊಂಡಿದ್ದ ಆರೋಪವಿದೆ.

‘ಭಾರತದಲ್ಲಿ ಜನಿಸಿರುವ ಶಶಿಧರ್‌, ಬಲ ಕಿವಿಯಲ್ಲಿ ಶ್ರವಣ ಸಾಧನವಿರಿಸಿಕೊಂಡಿದ್ದಾನೆ. 5 ಅಡಿ 7 ಇಂಚು ಎತ್ತರವಿದ್ದಾನೆ. ಎಲ್ಲ ಆರೋಪಿಗಳಿಗೆ ಸ್ಪೇನ್‌ ಜತೆ ಸಂಪರ್ಕವಿದೆ’ ಎಂದು ರಾಷ್ಟ್ರೀಯ ಅಪರಾಧ ವಿಭಾಗ ತಿಳಿಸಿದೆ.

Post Comments (+)