ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ: ನಾಳೆ ಎರಡು ವಿಶೇಷ ವಿಮಾನಗಳು ಭಾರತಕ್ಕೆ

Last Updated 5 ಮೇ 2020, 18:06 IST
ಅಕ್ಷರ ಗಾತ್ರ

ದುಬೈ: ಅರಬ್‌ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ವಾಪಸ್‌ ಕರೆ ತರಲು ಗುರುವಾರ (ಮೇ 7) ಎರಡು ವಿಶೇಷ ವಿಮಾನಗಳು ಪ್ರಯಾಣ ಬೆಳೆಸಲಿವೆ ಎಂದು ದುಬೈನ ಭಾರತೀಯ ರಾಯಭಾರಿ ಪವನ್‌ ಕಪೂರ್‌ ತಿಳಿಸಿದ್ದಾರೆ.

ಕೇರಳ ರಾಜ್ಯದ ಅರ್ಜಿದಾರರಿಂದ ಪ್ರಯಾಣ ಆರಂಭವಾಗಲಿದೆ.ಅಬುಧಾಬಿಯಿಂದ ಕೊಚ್ಚಿ ಮತ್ತು ದುಬೈನಿಂದ ಕೊಯಿಕ್ಕೋಡ್‌ಗೆ ಹೊರಡುವ ಎರಡು ವಿಮಾನಗಳ ಪ್ರಯಾಣಿಕರ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಟಿಕೆಟ್‌ಗಾಗಿ ಏರ್‌ ಇಂಡಿಯಾವನ್ನು ಸಂಪರ್ಕಿಸಲಾಗಿದೆ. ಈಚೆಗಷ್ಟೆ ವಲಸಿಗರಿಗೆ ಹೆಸರು ನೋಂದಾಯಿಸಲು ಅವಕಾಶ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಒತ್ತಡದಲ್ಲಿ ಇರುವ ಕಾರ್ಮಿಕರು, ಹಿರಿಯ ನಾಗರಿಕರು, ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವವರು, ಗರ್ಭೀಣಿಯರು, ಉದ್ಯೋಗ ಕಳೆದುಕೊಂಡವರು ಸೇರಿ ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಭಾರತಕ್ಕೆ ಮರಳಲು ಈವರೆಗೆ ಒಟ್ಟು 2 ಲಕ್ಷ ಮಂದಿ ವಲಸಿಗರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT