ದೇವರ ಅಸ್ತಿತ್ವ ಸಾಬೀತು ಪಡಿಸಿದರೆ ರಾಜೀನಾಮೆ !

7
ಫಿಲಿಪ್ಪೀನ್ಸ್‌ ಅಧ್ಯಕ್ಷ ರೊಡ್ರಿಗೊ ಡುಟೆರ್ಟ ಸವಾಲು

ದೇವರ ಅಸ್ತಿತ್ವ ಸಾಬೀತು ಪಡಿಸಿದರೆ ರಾಜೀನಾಮೆ !

Published:
Updated:

ಮನಿಲಾ: ‘ದೇವರು ಇದ್ದಾನೆ ಎನ್ನುವುದನ್ನು ಯಾರಾದರೂ ಸಾಬೀತು ಪಡಿಸಿದರೆ ಆ ಕ್ಷಣವೇ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಫಿಲಿಪ್ಪೀನ್ಸ್‌ ಅಧ್ಯಕ್ಷ ರೊಡ್ರಿಗೊ ಡುಟೆರ್ಟ ಸವಾಲು ಹಾಕಿದ್ದಾರೆ. 

ರೋಮನ್‌ ಕ್ಯಾಥೊಲಿಕ್‌ರು ಬಹುಸಂಖ್ಯಾತರಾಗಿರುವ ಫಿಲಿಪ್ಪೀನ್ಸ್‌ನಲ್ಲಿ ಅವರ ಈ ಹೇಳಿಕೆ ವಿವಾದ ಸೃಷ್ಟಿಸಿದೆ. ಈ ಹಿಂದೆ, ‘ದೇವರು ಮೂರ್ಖ’ ಎಂದು ಹೇಳಿಕೆ ನೀಡುವ ಮೂಲಕವೂ ಅವರು ವಿವಾದಕ್ಕೀಡಾಗಿದ್ದರು. 

 ದವಾವೊ ನಗರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ದೇವರು ಇದ್ದಾನೆ ಎಂಬುದಕ್ಕೆ ಒಂದೇ ಒಂದು ಸಾಕ್ಷಿ ನೀಡಿದರೆ ಅಥವಾ ಅವನ ಭಾವಚಿತ್ರ, ಮನುಷ್ಯರೊಂದಿಗೆ ತೆಗೆಸಿಕೊಂಡಿರುವ ಸೆಲ್ಫಿಯನ್ನು ತೋರಿಸಿದರೆ, ಯಾವುದೇ ವ್ಯಕ್ತಿ ದೇವರೊಂದಿಗೆ ನಾನು ಮಾತನಾಡಿದ್ದೇನೆ ಅವನನ್ನು ನೋಡಿದ್ದೇನೆ ಎಂಬುದನ್ನು ಸಾಬೀತುಪಡಿಸಿದರೆ ಆ ಕ್ಷಣವೇ ನಾನು ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿದ್ದಾರೆ.

ವಿರೋಧಪಕ್ಷದ ನಾಯಕ ನಾಲ್ಕನೇ ಅಂಟೊನಿಯೊ ಟ್ರಿಲ್ಲನೇಸ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ರೊಡ್ರಿಗೊ ದುಷ್ಟ ವ್ಯಕ್ತಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !