ಗುರುವಾರ , ಫೆಬ್ರವರಿ 20, 2020
28 °C

ಬೆಳ್ಳುಳ್ಳಿ ಸೇವನೆಯಿಂದ ಕೊರೊನಾ ವೈರಸ್‌ ಬಾರದಂತೆ ತಡೆಯಬಹುದೇ? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಹಾರದಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ಬಳಸುವುದರಿಂದ, ಬೆಳ್ಳುಳ್ಳಿಯನ್ನು ನೆನೆಸಿಟ್ಟ ನೀರು ಕುಡಿಯುವುದರಿಂದ ಕೊರೊನಾ ವೈರಸ್‌ ಅನ್ನು ಬಾರದಂತೆ ತಡೆಯಹುದು ಎಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದೆ. 

ಕೊರೊನಾ ವೈರಸ್‌ ಕುರಿತ ಸಂಶಯಗಳು, ಪ್ರಶ್ನೆಗಳಿಗೆ ಟ್ವಿಟರ್‌ನಲ್ಲಿ ಉತ್ತರಿಸುವ ಕೆಲಸ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ವೈರಸ್‌ ತಡೆಯುವಲ್ಲಿ ಬೆಳ್ಳುಳ್ಳಿಯ ಪಾತ್ರದ ಕುರಿತ ಮಿಥ್ಯ ಕಲ್ಪನೆಯನ್ನು ನಿವಾರಿಸಿದೆ. 

‘ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಅದು ಸೂಕ್ಷ್ಮ ಜೀವಿ ಪ್ರತಿರೋಧಕ. ಆದರೆ, ಸದ್ಯ ಎದುರಾಗಿರುವ ಕರೋನಾ ವೈರಸ್‌ ಅನ್ನು ಬೆಳ್ಳುಳ್ಳಿ ಸೇವನೆಯಿಂದ ತಡೆಗಟ್ಟಬಹುದು ಎಂಬುದಕ್ಕೆ ಪುರಾವೆಗಳಿಲ್ಲ,’ ಎಂದು ಸ್ಪಷ್ಟಪಡಿಸಿದೆ. 

ಬೆಳ್ಳುಳ್ಳಿ ಸೇವೆನೆ ಮಾಡಿದರೆ ಕೊರೊನಾ ವೈರಸ್‌ ಬಾರದಂತೆ ತಡೆಯಬಹುದು ಎಂಬ ಸಂದೇಶಗಳು ಜಗತ್ತಿನಾದ್ಯಂತ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಇದೇ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಿಥ್ಯೆಗಳನ್ನೆಲ್ಲ ಅಲ್ಲಗೆಳೆದಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು