ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಮಹಾಯುದ್ಧ ನಂತರದ ಬಹು ದೊಡ್ಡ ಸವಾಲು ಕೋವಿಡ್‌- 19: ವಿಶ್ವಸಂಸ್ಥೆ

Last Updated 2 ಏಪ್ರಿಲ್ 2020, 2:32 IST
ಅಕ್ಷರ ಗಾತ್ರ

ಪ್ಯಾರಿಸ್‌: ವಿಶ್ವದಾದ್ಯಂತ ತಲ್ಲಣ ಉಂಟುಮಾಡಿರುವಕೊರೊನಾ ವೈರಸ್‌ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದು ಎರಡನೇ ಮಹಾಯುದ್ಧದ ಬಳಿಕ ಎದುರಾಗಿರುವ ಅತಿ ದೊಡ್ಡ ವಿಪತ್ತಾಗಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ಪರಸ್ಪರ ದೇಶಗಳು ದಶಕಗಳಿಂದ ಹೊಂದಿದ್ದ ಉತ್ತಮ ಸಂಬಂಧದ ಮೇಲೂ ಕೊರೊನಾ ಸೋಂಕು ಪ್ರಕರಣ ದುಷ್ಪರಿಣಾಮ ಬೀರಿದೆ. ಸೌಹಾರ್ದ ಸಂಬಂಧಗಳೂ ಅಪಾಯದಲ್ಲಿವೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ ಕಳವಳ ವ್ಯಕ್ತಪಡಿಸಿದ್ದಾರೆ.

‘ಈ ರೋಗ ಪ್ರಪಂಚದ ಪ್ರತಿಯೊಬ್ಬರಿಗೂ ಆತಂಕ ತಂದೊಡ್ಡಿದ್ದು , ಆರ್ಥಿಕತೆಗೆ ತೀವ್ರ ಹೊಡೆತ ನೀಡಿದೆ. ಇತ್ತೀಚಿನ ದಿನಗಳಲ್ಲಿ ಕಂಡಿರದ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆ ಇದೆ’ ಎಂದರು.

‘ಕೋವಿಡ್ 19ನಿಂದಾಗಿ ಸಾವುನೋವು ಸಂಭವಿಸಿರುವುದಲ್ಲದೆ, ಆರ್ಥಿಕ ಬಿಕ್ಕಟ್ಟು ಕೂಡ ಹೊಡೆತ ಕೊಟ್ಟಿದೆ. ಇವೆರಡರ ಪರಿಣಾಮ ಮುಂದೆ ವಿಶ್ವದಲ್ಲಿ ಅಶಾಂತಿ, ಅಸ್ಥಿರತೆ ಹೆಚ್ಚಾಗುವುದಲ್ಲದೆ, ಸಂಘರ್ಷಮಯ ವಾತಾವರಣವೂ ಉಂಟಾಗಲಿದೆ. ಎರಡನೇ ಮಹಾಯುದ್ಧದ ನಂತರ ಜಗತ್ತು ಎದುರಿಸುತ್ತಿರುವ ದೊಡ್ಡ ಸವಾಲು ಇದು’ ಎಂದು ಅವರು ಹೇಳಿದ್ದಾರೆ.

ಯುರೋಪ್‌ಒಂದರಲ್ಲೇ ಈ ಮಹಾಮಾರಿಗೆ 30 ಸಾವಿರಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. ಇಟಲಿ, ಮತ್ತು ಸ್ಪೇನ್‌ಮಹಾಮಾರಿಗೆ ಶರಣಾಗಿ ಸಾಯುತ್ತಿರುವವರ ಪ್ರಮಾಣ ಈ ವೈರಸ್‌ನ ತವರು ಚೀನಾಕ್ಕಿಂತಲೂ ಹೆಚ್ಚಾಗಿದೆ. ಇಡೀ ಯುರೋಪ್‌ ಖಂಡದಲ್ಲಿ ಮೃತಪಡುತ್ತಿರುವ ನಾಲ್ವರಲ್ಲಿ, ಮೂವರು ಈ ದೇಶದವರೇ ಆಗಿದ್ದಾರೆ.

ಅಮೆರಿಕದಲ್ಲಿ 1.90 ಲಕ್ಷ ಜನರಲ್ಲಿ ಸೋಂಕು ದೃಢಪಟ್ಟಿದೆ.ಮುಂದಿನ ಎರಡು ವಾರಗಳು ತೀವ್ರ ನೋವಿನ ದಿನಗಳಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಎಚ್ಚರಿಕೆ ಸಂದೇಶ ರವಾನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT