ಸಿರಿಯಾ ಶಸ್ತ್ರಾಸ್ತ್ರ ಸಂಗ್ರಹಾಗಾರ ಸ್ಫೋಟ: 12 ಮಕ್ಕಳು ಸೇರಿ 39 ಮಂದಿ ಸಾವು

7

ಸಿರಿಯಾ ಶಸ್ತ್ರಾಸ್ತ್ರ ಸಂಗ್ರಹಾಗಾರ ಸ್ಫೋಟ: 12 ಮಕ್ಕಳು ಸೇರಿ 39 ಮಂದಿ ಸಾವು

Published:
Updated:

ಬೈರುತ್‌: ವಾಯುವ್ಯ ಸಿರಿಯಾ ಪ್ರಾಂತ್ಯದ ಇಡ್ಲಿಬ್‌ನಲ್ಲಿ ಭಾನುವಾರ ಶಸ್ತ್ರಾಸ್ತ್ರ ಸಂಗ್ರಹಾಗಾರ ಸ್ಫೋಟಗೊಂಡಿದ್ದು, 12 ಮಕ್ಕಳು ಸೇರಿ 39 ನಾಗರಿಕರು ಮೃತಪಟ್ಟಿದ್ದಾರೆ ಎಂದು ಇಲ್ಲಿನ ಯುದ್ಧ ವೀಕ್ಷಕರು ಹೇಳಿದ್ದಾರೆ.

ಸರ್ಮದಾ ಪಟ್ಟಣದಲ್ಲಿನ ಕಟ್ಟಡದ ಸ್ಥಳವೊಂದರಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಎರಡು ಕಟ್ಟಡಗಳು ನೆಲಸಮವಾಗಿವೆ. 

ಕಟ್ಟಡದ ಅವಶೇಷಗಳ ಅಡಿ ಸಿಲುಕಿರುವವರನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹದು ಎಂದು ಸಿರಿಯಾದಲ್ಲಿನ ಮಾನವ ಹಕ್ಕುಗಳ ವೀಕ್ಷಕರು ಹೇಳಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !