ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಎಟಿಎಫ್‌: ಬೂದು ಪಟ್ಟಿಯಲ್ಲೇ ಪಾಕಿಸ್ತಾನ

ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌) ಸಭೆಯಲ್ಲಿ ನಿರ್ಧಾರ
Last Updated 18 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಪ್ಯಾರಿಸ್‌: ಉಗ್ರರಿಗೆ ಲಭಿಸುವ ಆರ್ಥಿಕ ನೆರವು ತಡೆಗಟ್ಟುವಲ್ಲಿ ಹಾಗೂ ಹಣ ಅಕ್ರಮ ವರ್ಗಾವಣೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಪಾಕಿಸ್ತಾನವನ್ನು ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌) ಬೂದು ಪಟ್ಟಿಯಲ್ಲೇ ಉಳಿಸಿದೆ.

ಇಲ್ಲಿ ಹಮ್ಮಿಕೊಂಡಿದ್ದ ಎಫ್‌ಎಟಿಎಫ್‌ ಐದು ದಿನಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಭಯೋತ್ಪಾದಕರ ನಿಗ್ರಹಕ್ಕಾಗಿ ರೂಪಿಸಿರುವ ಕಾರ್ಯಯೋಜನೆಯನ್ನು ಪಾಕಿಸ್ತಾನ ಪೂರ್ಣಗೊಳಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಭಯೋತ್ಪಾದನೆಗೆ ಆರ್ಥಿಕ ನೆರವು ಒದಗಿಸುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸಂಸ್ಥೆಯಾಗಿರುವ ಎಫ್‌ಎಟಿಎಫ್‌ ನೀಡಿದೆ.

ಭಾರತದಲ್ಲಿ ಸರಣಿ ದಾಳಿ ನಡೆಸಿರುವ ಲಷ್ಕರ್‌ ಎ ತಯಬಾ ಮತ್ತು ಜೈಷ್‌ ಎ ಮೊಹಮ್ಮದ್‌ ಮೊದಲಾದ ಉಗ್ರ ಸಂಘಟನೆಗಳಿಗೆ ಲಭಿಸುವ ಹಣಕಾಸಿನ ನೆರವನ್ನು ನಿಯಂತ್ರಿಸುವುದು ಸೇರಿದಂತೆ 27 ಕಾರ್ಯಯೋಜನೆಗಳನ್ನು ಪಾಕ್‌ಗೆ ನೀಡಲಾಗಿತ್ತು. ಆದರೆ ಅದು ಕೇವಲ ಐದನ್ನು ಮಾತ್ರ ನಿರ್ವಹಿಸಿದೆ ಎಂದುಎಫ್‌ಎಟಿಎಫ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT