ಮಂಗಳವಾರ, ಸೆಪ್ಟೆಂಬರ್ 24, 2019
29 °C

ಕ್ಯಾಲಿಫೋರ್ನಿಯ ದೋಣಿ ದುರಂತ, ಭಾರತೀಯ ದಂಪತಿ ದುರ್ಮರಣ

Published:
Updated:

ಕ್ಯಾಲಿಫೋರ್ನಿಯಾ: ಸಾಂತಾ ಕ್ರುಸ್ ದ್ವೀಪದ ಪ್ರವಾಸ ದೋಣಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ ಪರಿಣಾಮ ಭಾರತೀಯ ಮೂಲದ ದಂಪತಿ ಸೇರಿದಂತೆ 34 ಮಂದಿ ಪ್ರವಾಸಿಗರು ಸಾವಿಗೀಡಾಗಿದ್ದಾರೆ.

ನಾಗಪುರ ಮೂಲದ ವೈದ್ಯ ಡಿಯೋಪುಜಾರಿ ಅವರ ಪುತ್ರಿ ಸಂಜೀರಿ ಡಿಯೋಪುಜಾರಿ ಹಾಗೂ ಇವರ ಪತಿ ಕೌಸ್ತುಭ ನಿರ್ಮಲ್ ಮೃತಪಟ್ಟವರು. ಸೋಮವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ. 

ಮೃತದಂಪತಿ ಭಾರತದಿಂದ ವಲಸೆ ಹೋಗಿ ಕ್ಯಾಲಿಫೋರ್ನಿಯಾದಲ್ಲಿಯೇ ನೆಲೆಸಿದ್ದರು. ಸಾಂತಾ ಕ್ರುಸ್‌ನಲ್ಲಿ ಪ್ರವಾಸಕ್ಕೆ ತೆರಳಿ ವಾಪಸಾಗುತ್ತಿದ್ದಾಗ ಬೆಳಗಿನ ಜಾವವಾದ ಪರಿಣಾಮ ಎಲ್ಲರೂ ನಿದ್ರೆಯಲ್ಲಿದ್ದರು. ಈ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಜ್ವಾಲೆ ಸಂಪೂರ್ಣ ಆವರಿಸಿಕೊಂಡಾಗ ಪ್ರವಾಸಿಗರು ನಿದ್ರೆಯಿಂದ ಎಚ್ಚರಗೊಂಡರೂ ನೀರಿನ ಮಧ್ಯೆ ಇದ್ದ ಪರಿಣಾಮ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದರು. ಇದರಿಂದಾಗಿ 34 ಮಂದಿಯೂ ಸಾವಿಗೀಡಾಗಿದ್ದಾರೆ. ಕೇವಲ ಒಬ್ಬರ ದೇಹ ಮಾತ್ರ ಅರೆ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಉಳಿದವರ ದೇಹಗಳು ಬೆಂಕಿಗೆ ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಡಿಯೋಪುಜಾರಿ ಅವರ ಮತ್ತೊಬ್ಬ ಪುತ್ರಿ ಅಮೆರಿಕಾದಲ್ಲಿ ವಾಸವಾಗಿದ್ದು, ಈ ಘಟನೆ ಕುರಿತು ಭಾರತದಲ್ಲಿರುವ ಮೃತರ ಕುಟುಂಬಕ್ಕೆ ಸಾವಿನ ಬಗ್ಗೆ ಇನ್ನೂ ನಿಖರ ಮಾಹಿತಿ ತಿಳಿದಿಲ್ಲ ಎನ್ನಲಾಗಿದೆ. ಶವಗಳು ಗುರುತು ಹಿಡಿಯಲಾರದಷ್ಟು ಸುಟ್ಟು ಕರಕಲಾಗಿರುವ ಕಾರಣ ಕ್ಯಾಲಿಫೋರ್ನಿಯಾದ ಪೊಲೀಸರು ಮಹಜರು ನಡೆಸಿದ್ದು, ಅವರ ವಾರಸುದಾರರಿಗೆ ನೀಡಲು ಮಾಹಿತಿ ಸಂಗ್ರಹಿಸುತ್ತಿದ್ದಾರೆ. 

Post Comments (+)