ಬಾಸ್ಟನ್‌: ಅನಿಲ ಸ್ಫೋಟ; ಜನರ ಸ್ಥಳಾಂತರ

7

ಬಾಸ್ಟನ್‌: ಅನಿಲ ಸ್ಫೋಟ; ಜನರ ಸ್ಥಳಾಂತರ

Published:
Updated:
Deccan Herald

ನ್ಯೂಯಾರ್ಕ್‌(ಎಎಫ್‌ಪಿ): ಉತ್ತರ ಬಾಸ್ಟನ್‌ನ ಮೂರು ನಗರಗಳಲ್ಲಿ ಅನಿಲ ಸ್ಫೋಟ ಸಂಭವಿಸಿದ್ದು, ಭಾರಿ ಸಂಖ್ಯೆಯಲ್ಲಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗಿದೆ.

ಅಮೆರಿಕದ ಲಾರೆನ್ಸ್‌, ಅಂಡೋವರ್‌ ಮತ್ತು ಉತ್ತರ ಅಂಡೊವರ್‌ ನಗರಗಳಲ್ಲಿ ಗುರುವಾರ 70 ಸ್ಫೋಟ ಸಂಭವಿಸಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸ್ಫೋಟದ ಬಳಿಕ ಈ ಪ್ರದೇಶಗಳಲ್ಲಿ ಅನಿಲ ಪೂರೈಕೆ ಹಾಗೂ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲಾಗಿದೆ’ ಎಂದೂ ತಿಳಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಜಂಟಿ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !