ಪಾಕ್‌ : ಸಿಖ್ ಸುದ್ದಿ ವಾಚಕ

7
ಹರ್ಮೀತ್ ಸಿಂಗ್‌ಗೆ ಅವಕಾಶ

ಪಾಕ್‌ : ಸಿಖ್ ಸುದ್ದಿ ವಾಚಕ

Published:
Updated:
ಹರ್ಮೀತ್ ಸಿಂಗ್

ಕರಾಚಿ(ಪಿಟಿಐ): ಸಿಖ್‌ ಸಮುದಾಯದ ವ್ಯಕ್ತಿಯೊಬ್ಬರು ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಸುದ್ದಿ ವಾಚಕರ ಹುದ್ದೆಗೆ ನೇಮಕವಾಗಿದ್ದಾರೆ. ಖೈಬರ್ ಪ್ರಾಂತ್ಯದ ಚಾಕೇಸರ್‌ನ ಹರ್ಮೀತ್ ಸಿಂಗ್ ಇಲ್ಲಿನ ಪಬ್ಲಿಕ್ ನ್ಯೂಸ್‌ ಚಾನಲ್‌ಗೆ ನೇಮಕವಾಗಿದ್ದಾರೆ.

ಮಾಧ್ಯಮ ಸಂಸ್ಥೆ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ‘ಪಾಕಿಸ್ತಾನದ ಮೊದಲ ಸಿಖ್ ನ್ಯೂಸ್ ಆ್ಯಂಕರ್’ ಎಂದು ಬರೆದುಕೊಂಡಿದೆ.

‘ಪಾಕಿಸ್ತಾನದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಾಧ್ಯಮ ಕ್ಷೇತ್ರದ ಬಗ್ಗೆ ನಾನು ಯಾವಾಗಲೂ ಆಸಕ್ತಿ ಹೊಂದಿದ್ದೆ. ಧರ್ಮದ ಮೂಲಕ ಗುರುತಿಸಿ ಕೊಂಡು ಮಾಧ್ಯಮ ಕ್ಷೇತ್ರದಿಂದ ಯಾವುದೇ ಲಾಭವನ್ನೂ ಪಡೆಯುವುದಿಲ್ಲ. ನನ್ನ ಸತತ ಪರಿಶ್ರಮದ ಫಲವಾಗಿ ಗುರುತಿಸುವ ಹಂತಕ್ಕೆ ಬಂದಿದ್ದೇನೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !