ಬುಧವಾರ, ಜನವರಿ 22, 2020
21 °C

ಕೀನ್ಯಾ: ದಾಳಿಗೆ ನಾಲ್ವರು ಬಲಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ನೈರೋಬಿ : ಪೂರ್ವ ಕೀನ್ಯಾದ ಸೊಮಾಲಿ ಗಡಿಪ್ರದೇಶದಲ್ಲಿ ಶಂಕಿತ ಅಲ್‌ ಶಬಾಬ್ ಇಸ್ಲಾಮಿಸ್ಟ್ ಸಂಘಟನೆ ನಡೆಸಿದ ಗುಂಡಿನ ದಾಳಿಯಲ್ಲಿ ಪುಟ್ಟ ಮಗು ಸೇರಿದಂತೆ ನಾಲ್ವರು ನಾಗರಿಕರು ಮಂಗಳವಾರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇಬ್ಬರು ದಾಳಿಕೋರರನ್ನು ಪೊಲೀಸರು ಗುಂಡಿಕ್ಕಿ ಸಾಯಿಸಿದ್ದಾರೆ. 

‘ಮಂಗಳವಾರ ಬೆಳಿಗ್ಗೆ 10ಕ್ಕೂ ಹೆಚ್ಚಿನ ದಾಳಿಕೋರರು ಸಂಪರ್ಕ ಸಂವಹನದ ಕೇಂದ್ರವನ್ನು ನಾಶಪಡಿಸಲು ಯತ್ನಿಸಿದರು. ಈ ದಾಳಿಯಲ್ಲಿ ಸಣ್ಣ ಮಗು, ಶಿಕ್ಷಕ ಸೇರಿದಂತೆ ನಾಲ್ವರು ನಾಗರಿಕರು ಬಲಿಯಾದರು’ ಎಂದು ಪೊಲೀಸ್ ವಕ್ತಾರ ಚಾರ್ಲ್ಸ್‌ ಓವಿನೊ ತಿಳಿಸಿದ್ದಾರೆ. 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು