ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: ವಿವಾದಿತ ಲೆ.ಜನರಲ್‌ ಶವೇಂದ್ರ ಸೇನಾ ಮುಖ್ಯಸ್ಥ

Last Updated 19 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಕೊಲಂಬೊ: ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಎದುರಿ ಸುತ್ತಿರುವ ಲೆಫ್ಟಿನೆಂಟ್‌ ಜನರಲ್‌ ಶವೇಂದ್ರ ಸಿಲ್ವಾ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಿ ಶ್ರೀಲಂಕಾ ಅಧ್ಯಕ್ಷರ ಕಚೇರಿ ಆದೇಶ ಹೊರಡಿಸಿದೆ.

ಲೆಫ್ಟಿನೆಂಟ್‌ ಜನರಲ್‌ ಮಹೇಶ್‌ ಸೇನನಾಯ್ಕೆ ಅವರ ಸೇವಾವಧಿಯನ್ನು ವಿಸ್ತರಣೆ ಆಗದೇ ಇರುವ ಕಾರಣ, ವಿವಾದಗಳಿಂದಲೇ ಸುತ್ತುವರಿದಿರುವ ಸಿಲ್ವಾ ಅವರು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಎಲ್‌ಟಿಟಿಇ ವಿರುದ್ಧ 2009ರಲ್ಲಿ ನಡೆದ ಅಂತಿಮ ಯುದ್ಧದಲ್ಲಿ ಸಿಲ್ವಾ ಸೇನೆಯ 58ನೇ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ನಾಗರಿಕರು, ಆಸ್ಪತ್ರೆ ಮೇಲೆ ದಾಳಿ ನಡೆಸಿದ ಆರೋಪ ಇವರ ಮೇಲಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ 2013ರಲ್ಲಿ ಅಂಗೀಕರಿಸಿದ ನಿರ್ಣಯದಲ್ಲೂ ಸಿಲ್ವಾ ಅವರ ಹೆಸರು ಕೇಳಿಬಂದಿತ್ತು. ವಿಶ್ವಸಂಸ್ಥೆಯ ವರದಿ ಪ್ರಕಾರ ಯುದ್ಧ ಅಂತ್ಯವಾಗುವ ಸಂದರ್ಭದಲ್ಲಿ ಅಂದಾಜು 45 ಸಾವಿರ ತಮಿಳು ನಾಗರಿಕರನ್ನು ಹತ್ಯೆ ಮಾಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.

ಆದರೆ ಇದನ್ನು ಶ್ರೀಲಂಕಾ ಸೇನೆ ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT