ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಜ್ ಫ್ಲಾಯ್ಡ್‌ ಅಂತ್ಯಕ್ರಿಯೆ; ನೂರಾರು ಜನರ ಕಂಬನಿ

Last Updated 10 ಜೂನ್ 2020, 6:33 IST
ಅಕ್ಷರ ಗಾತ್ರ

ಹ್ಯೂಸ್ಟನ್: ವರ್ಣ ತಾರತಮ್ಯದಿಂದ ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟ ಆಫ್ರಿಕಾ ಮೂಲದ ಅಮೆರಿಕನ್ ಜಾರ್ಜ್ ಫ್ಲಾಯ್ಡ್ ಅವರ ಅಂತ್ಯಕ್ರಿಯೆಯಲ್ಲಿ 500ಕ್ಕೂ ಹೆಚ್ಚು ಜನ ಭಾಗಿಯಾಗಿ ಕಂಬನಿ ಮಿಡಿದರು.

ಮೇ 25ರಂದು ಮಿನ್ನೆಪೊಲಿಸ್‌ನಲ್ಲಿ ಶ್ವೇತ ವರ್ಣದ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಎಂಬುವರು ಫ್ಲಾಯ್ಡ್‌ಗೆ ಕೈಕೋಳ ತೊಡಿಸಿ, ಕುತ್ತಿಗೆಯ ಮೇಲೆ 8 ನಿಮಿಷಗಳ ಕಾಲ ಮಂಡಿಯೂರಿ ನೆಲಕ್ಕೆ ಅದುಮಿ ಹಿಡಿದಿದ್ದರು. ಫ್ಲಾಯ್ಡ್ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಇದು ಅಮೆರಿಕದಾದ್ಯಂತ ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಹಿಂಸಾತ್ಮಕ ಪ್ರತಿಭಟನೆ, ಲೂಟಿ ನಡೆಯಿತು. ಜಗತ್ತಿನಾದ್ಯಂತ ವರ್ಣಬೇಧ ನೀತಿಯ ವಿರುದ್ಧ ಟೀಕೆ ವ್ಯಕ್ತವಾಯಿತ್ತು.

ಫ್ಲಾಯ್ಡ್ ಅವರ ಮೃತದೇಹವನ್ನು ಹ್ಯೂಸ್ಟನ್‌ಗೆ ಶನಿವಾರ ರಾತ್ರಿ ತರಲಾಯಿತು. ಶ್ವೇತವರ್ಣದ ಸಾರೋಟಿನಲ್ಲಿ ಚಿನ್ನದ ಬಣ್ಣದ ಪೆಟ್ಟಿಗೆಯಲ್ಲಿ ಅವರ ಮೃತದೇಹವನ್ನು ಮೆರವಣಿಗೆ ಮೂಲಕ ಸಾಗಿಸಲಾಯಿತು. ಕೋವಿಡ್–19 ಭೀತಿಯ ನಡುವೆಯೇ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ ಮಂಗಳವಾರ ಅಂತ್ಯಕ್ರಿಯೆ ನಡೆಸಲಾಯಿತು. ತಾಯಿಯ ಸಮಾಧಿ ಪಕ್ಕದಲ್ಲೇ ಅವರ ಸಮಾಧಿ ಮಾಡಲಾಯಿತು.

ಫ್ಲಾಯ್ಡ್ ಹುಟ್ಟಿದ ಉತ್ತರ ಕೆರೊಲಿನಾದ ರಿಫೋರ್ಡ್, ಬೆಳೆದ ಹ್ಯೂಸ್ಟನ್ ಹಾಗೂ ಮೃತಪಟ್ಟ ಮಿನ್ನೆಪೊಲಿಸ್‌ ನಗರಗಳಲ್ಲಿ ಆರು ದಿನಗಳ ಶೋಕಾಚರಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT