ಶನಿವಾರ, ಜೂನ್ 19, 2021
21 °C
‘ಐಎಂಎಫ್‌’ನ ಉನ್ನತ ಹುದ್ದೆಗೇರಿದ ಮೊದಲ ಮಹಿಳೆ

ಐಎಂಎಫ್‌ ಮುಖ್ಯ ಆರ್ಥಿಕತಜ್ಞೆಯಾಗಿ ಮೈಸೂರಿನ ಗೀತಾ ಗೋಪಿನಾಥ್‌ ಅಧಿಕಾರ ಸ್ವೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯ ಆರ್ಥಿಕತಜ್ಞೆಯಾಗಿ ಮೈಸೂರಿನ ಗೀತಾ ಗೋಪಿನಾಥ್‌ (47) ಅಧಿಕಾರ ಸ್ವೀಕರಿಸಿದ್ದಾರೆ. ತನ್ಮೂಲಕ ‘ಐಎಂಎಫ್‌’ನ ಈ ಉನ್ನತ ಹುದ್ದೆಗೆ ಏರಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಮಗಳು ಉನ್ನತ ಸ್ಥಾನಕ್ಕೇರುವ ವಿಶ್ವಾಸವಿತ್ತು: ಗೀತಾ ಗೋಪಿನಾಥ್ ಪೋಷಕರ ಸಂಭ್ರಮ

ಡಿಸೆಂಬರ್‌ 31ರಂದು ಸೇವಾ ನಿವೃತ್ತರಾಗಿರುವ ಐಎಂಎಫ್‌ನ ಸಂಶೋಧನಾ ವಿಭಾಗದ ನಿರ್ದೇಶಕ ಮತ್ತು ಆರ್ಥಿಕ ಸಲಹೆಗಾರರಾಗಿದ್ದ ಮೌರೈಸ್‌ ಆಬ್ಸ್ಟ್‌ಫೆಲ್ಡ್‌  ಅವರ ಉತ್ತರಾಧಿಕಾರಿಯಾಗಿ ಗೀತಾ ಅವರು ಕಾರ್ಯನಿರ್ವಹಿಸಲಿದ್ದಾರೆ.

ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ  ಕ್ರಿಸ್ಟಿನ್‌ ಲಗಾರ್ಡ್‌ ಅವರು ಗೀತಾ ಅವರನ್ನು ಈ ಹುದ್ದೆಗೆ ನೇಮಿಸುವ ಸಂಬಂಧ ಕಳೆದ ವರ್ಷದ ಅಕ್ಟೋಬರ್‌ 1ರಂದು ಆದೇಶ ಹೊರಡಿಸಿದ್ದರು.

ಇದನ್ನೂ ಓದಿ: ಭಾರತ ಮೂಲದ ಗೀತಾ ಗೋಪಿನಾಥ್‌ ಐಎಂಎಫ್‌ನ ನೂತನ ಮುಖ್ಯ ಆರ್ಥಿಕ ತಜ್ಞೆ​

ಈ ಹುದ್ದೆಗೆ ಏರಿದ ಭಾರತದ ಎರಡನೇ ಅರ್ಥಶಾಸ್ತ್ರಜ್ಞೆ ಇವರಾಗಿದ್ದಾರೆ. ಆರ್‌ಬಿಐನ ಮಾಜಿ ಗವರ್ನರ್‌ ರಘುರಾಂ ರಾಜನ್‌ ಅವರು ಇದಕ್ಕೂ ಮೊದಲು ಈ ಹುದ್ದೆ ಅಲಂಕರಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು