ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಜಗತ್ತಿನಾದ್ಯಂತ1,65,000 ಮಂದಿ ಸಾವು, ಅಮೆರಿಕದಲ್ಲಿ 7.5 ಲಕ್ಷ ಪ್ರಕರಣ

Last Updated 20 ಏಪ್ರಿಲ್ 2020, 14:59 IST
ಅಕ್ಷರ ಗಾತ್ರ

ಪ್ಯಾರಿಸ್‌: ಕೊರೊನಾ ವೈರಸ್‌ ಸೋಂಕಿನಿಂದ ಜಗತ್ತಿನಾದ್ಯಂತ ಸಾವಿಗೀಡಾದವರ ಸಂಖ್ಯೆ ಸೋಮವಾರ 1,65,216ಕ್ಕೆ ಏರಿಕೆಯಾಗಿದೆ.

ಚೀನಾದಲ್ಲಿ ಮೊದಲಿಗೆ ವರದಿಯಾದ ಕೊರೊನಾ ವೈರಸ್‌ ಸೋಂಕು, ಜಗತ್ತಿನ 193 ರಾಷ್ಟ್ರಗಳಿಗೆ ವ್ಯಾಪಿಸಿದೆ. ಈವರೆಗೂ ಕೋವಿಡ್–19 ದೃಢಪಟ್ಟ ಒಟ್ಟು 24,03,410 ಪ್ರಕರಣಗಳು ದಾಖಲಾಗಿವೆ. ಸೋಂಕಿತರ ಪೈಕಿ 5,37,700 ಮಂದಿ ಗುಣಮುಖರಾಗಿದ್ದಾರೆ.

ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕು ಪ್ರಕರಣಗಳು ಅಮೆರಿಕದಲ್ಲಿ ದಾಖಲಾಗಿದೆ. ಒಟ್ಟು 7,59,786 ಕೋವಿಡ್‌–19 ದೃಢಪಟ್ಟ ಪ್ರಕರಣಗಳು ವರದಿಯಾಗಿವೆ ಹಾಗೂ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 40,683ಕ್ಕೆ ಏರಿಕೆಯಾಗಿದೆ. ಕನಿಷ್ಠ 70,980 ಮಂದಿ ಚೇತರಿಸಿಕೊಂಡಿದ್ದಾರೆ.

ಇಟಲಿ ಕೊರೊನಾ ಸೋಂಕಿನ ಹಿಡಿತಕ್ಕೆ ಸಿಲುಕಿರುವ ಮತ್ತೊಂದು ರಾಷ್ಟ್ರ. ಅಲ್ಲಿ ಒಟ್ಟು 1,78,972 ಪ್ರಕರಣಗಳು ದಾಖಲಾಗಿದ್ದು, 23,660 ಮಂದಿ ಮೃತಪಟ್ಟಿದ್ದಾರೆ. ಇನ್ನು ಸ್ಪೇನ್‌ನಲ್ಲಿ 2,00,210 ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿದ್ದು, 20,852 ಮಂದಿ ಮೃತಪಟ್ಟಿದ್ದಾರೆ. ಫ್ರಾನ್ಸ್‌ನಲ್ಲಿ ಒಟ್ಟು 1,52,894 ಪ್ರಕರಣಗಳ ಪೈಕಿ 19,718 ಮಂದಿ ಸಾವು ಹಾಗೂ ಬ್ರಿಟನ್‌ನಲ್ಲಿ 1,20,067 ಪ್ರಕರಣಗಳಲ್ಲಿ 16,060 ಮಂದಿ ಸಾವಿಗೀಡಾಗಿದ್ದಾರೆ.

ಅಮೆರಿಕ ಮತ್ತು ಕೆನಡಾ ಸೇರಿ 7,93,169 ಪ್ರಕರಣಗಳು, 42,212 ಸಾವು; ಏಷ್ಯಾದಲ್ಲಿ 166,453 ಪ್ರಕರಣಗಳು, 7,030 ಸಾವು; ಯುರೋಪ್‌ನಲ್ಲಿ 11,83,307 ಪ್ರಕರಣಗಳು, 1,04,028 ಸಾವು; ಮಧ್ಯ ಪ್ರಾಚ್ಯದಲ್ಲಿ 1,26,793 ಪ್ರಕರಣಗಳು 5,664 ಸಾವು; ಲ್ಯಾಟಿನ್‌ ಅಮೆರಿಕ ಮತ್ತು ಕೆರಿಬಿಯನ್‌ ವಲಯದಲ್ಲಿ 1,03,857 ಪ್ರಕರಣಗಳು 5,068 ಸಾವು; ಆಫ್ರಿಕಾದಲ್ಲಿ 21,957 ಪ್ರಕರಣಗಳು 1,124 ಮಂದಿ ಸಾವಿಗೀಡಾಗಿದ್ದಾರೆ. ಚೀನಾದಲ್ಲಿ 82,747 ಪ್ರಕರಣಗಳು ದಾಖಲಾಗಿದ್ದು, 4,632 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ರಾಷ್ಟ್ರಗಳ ಅಧಿಕೃತ ಮೂಲಗಳಿಂದ ಪಡೆದ ಮಾಹಿತಿಯನ್ನು ಸಂಗ್ರಹಿಸಿ ಎಎಫ್‌ಪಿ ಈ ಲೆಕ್ಕ ಮುಂದಿಟ್ಟಿದೆ. ಬಹುತೇಕ ರಾಷ್ಟ್ರಗಳು ತುರ್ತು ಪ್ರಕರಣಗಳಲ್ಲಿ ಮಾತ್ರ ಕೊರೊನಾ ವೈರಸ್‌ ಸೋಂಕು ಪರೀಕ್ಷೆ ನಡೆಸುತ್ತಿರುವುದರಿಂದ ವಾಸ್ತವದಲ್ಲಿ ಸೋಂಕು ಪ್ರಕರಣಗಳು ಹೆಚ್ಚಿರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT