ಶುಕ್ರವಾರ, ಡಿಸೆಂಬರ್ 13, 2019
26 °C
ಗೂಗಲ್‌ನ ‘ನೈಟಿಂಗೆಲ್‌’ ಯೋಜನೆಯ ತನಿಖೆ

ಜನರ ಆರೋಗ್ಯ ಮಾಹಿತಿ ಹಂಚಿಕೆ?

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸ್ಯಾನ್‌ ಫ್ರಾನ್ಸಿಸ್ಕೊ: ಆರೋಗ್ಯ ಸೇವೆಯನ್ನು ಆಧುನೀಕರಣಗೊಳಿಸುವ ಉದ್ದೇಶದಿಂದ ಗೂಗಲ್‌ ಆರಂಭಿಸಿರುವ ‘ನೈಟಿಂಗೇಲ್‌’ ಯೋಜನೆ, ಇದೀಗ ತನಿಖೆ ಎದುರಿಸುವಂತಾಗಿದೆ. 

ದಾದಿಯಾಗಿ ಸೇವೆ ಸಲ್ಲಿಸುವುದನ್ನು ಒಂದು ವೃತ್ತಿಯಾಗಿ ಬದಲಾಯಿಸಿದ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಸ್ಮರಣಾರ್ಥ, ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದಾಗಿ ಗೂಗಲ್‌ ಮಂಗಳವಾರ ಘೋಷಿಸಿತ್ತು.

ಯೋಜನೆಯಡಿ ಗೂಗಲ್‌ ಹಾಗೂ ಅಸೆನ್ಷನ್‌ ಹೆಲ್ತ್‌ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, ಅಮೆರಿಕದ ಲಕ್ಷಾಂತರ ಜನರ ಖಾಸಗಿ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸಲಿದೆ. ಈ ಘೋಷಣೆಬೆನ್ನಲ್ಲೇ, ನಿಯಮಗಳನ್ನು ಗೂಗಲ್‌ ಸಂಸ್ಥೆ ಸೂಕ್ತವಾಗಿ ಪಾಲಿಸುತ್ತಿದೆಯೇ ಎನ್ನುವುದನ್ನು ತನಿಖೆ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು