ಸೋಮವಾರ, ನವೆಂಬರ್ 18, 2019
25 °C

ಅಮೆರಿಕ: ಎಚ್‌1–ಬಿ ವೀಸಾ ಅರ್ಜಿ ಶುಲ್ಕ ಹೆಚ್ಚಳ

Published:
Updated:

ವಾಷಿಂಗ್ಟನ್‌: ಉದ್ಯೋಗ ಅರಸಿ ಅಮೆರಿಕಕ್ಕೆ ಬರುವವರಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ಪರಿಷ್ಕರಿಸಲಾಗಿದ್ದು, ಅರ್ಜಿ ಶುಲ್ಕದ ಮೊತ್ತದಲ್ಲಿ ₹ 700 ರಷ್ಟು (10 ಡಾಲರ್‌) ಹೆಚ್ಚಳ ಮಾಡಲಾಗಿದೆ.

‘ಈ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ಎಚ್‌1–ಬಿ ವೀಸಾ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತಗೊಳಿಸಲು ಹಾಗೂ ಪರಿಣಾಮಕಾರಿಯನ್ನಾಗಿ ಮಾಡಲು ಶುಲ್ಕ ಹೆಚ್ಚಳದಿಂದ ಸಾಧ್ಯವಾಗಲಿದೆ’ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಸಂಸ್ಥೆಯ (ಯುಎಸ್‌ಸಿಐಎಸ್‌) ಹಂಗಾಮಿ ನಿರ್ದೇಶಕ ಕೆನ್‌ ಕುಕುನೆಲ್ಲಿ ಗುರುವಾರ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)