ಬುಧವಾರ, ಜನವರಿ 22, 2020
27 °C
ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ತೀರ್ಪು

ಉಗ್ರರಿಗೆ ನೆರವು: ಹಫೀಜ್‌ ದೋಷಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಹೋರ್‌: ಮುಂಬೈ ದಾಳಿ ಸಂಚುಕೋರ ಮತ್ತು ನಿಷೇಧಿತ ಜೆಯುಡಿ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್ ಹಾಗೂ ಆತನ ಮೂವರು ಸಹಚರರು, ಉಗ್ರರಿಗೆ ಆರ್ಥಿಕ ನೆರವು ನೀಡಿರುವುದು ಸಾಬೀತಾಗಿದೆ ಎಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ಹಫೀಜ್‌ ಸಯೀದ್‌ ಹಾಗೂ ಹಫೀಜ್ ಅಬ್ದುಲ್‌ ಸಲಾಮ್‌ ಬಿನ್‌ ಮೊಹಮ್ಮದ್‌, ಮೊಹಮ್ಮದ್‌ ಅಶ್ರಫ್‌ ಹಾಗೂ ಜಾಫರ್‌ ಇಕ್ಬಾಲ್‌ ಅವರನ್ನು ದೋಷಿಗಳು ಎಂದು ನ್ಯಾಯಾಲಯ ಹೇಳಿದೆ.

ಸಾಕ್ಷಿದಾರರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸುವಂತೆ ಸೂಚಿಸಿದ ನ್ಯಾಯಾಧೀಶ ಅರ್ಷದ್‌ ಹುಸೇನ್‌ ಬುಟ್ಟಾ, ಗುರುವಾರಕ್ಕೆ ವಿಚಾರಣೆಯನ್ನು ಮುಂದೂಡಿದರು.

69 ವರ್ಷದ ಸಯೀದ್‌ ಮತ್ತು ಆತನ ಸಹಚರರು ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು