ಶುಕ್ರವಾರ, ಆಗಸ್ಟ್ 23, 2019
26 °C

ಹಮ್ಜಾನಿಂದ ಅಮೆರಿಕಕ್ಕೆ ಬೆದರಿಕೆಯಿತ್ತು: ಟ್ರಂಪ್‌

Published:
Updated:
Prajavani

ವಾಷಿಂಗ್ಟನ್‌: ಆಲ್‌ಕೈದಾ ಉಗ್ರ ಸಂಘಟನೆಯ ಹಮ್ಜಾ ಬಿನ್‌ ಲಾಡೆನ್‌ ಅಮೆರಿಕಕ್ಕೆ ಬೆದರಿಕೆಯೊಡ್ಡುತ್ತಿದ್ದ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. ಆದರೆ ಹಮ್ಜಾ ಹತ್ಯೆಯ ಕುರಿತ ಮಾಧ್ಯಮಗಳ ವರದಿಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.

‘ಆತ ಅಮೆರಿಕದ ಬಗ್ಗೆ ತುಂಬ ಕೆಟ್ಟದಾಗಿ ಮಾತನಾಡುತ್ತಿದ್ದ. ನಮ್ಮ ದೇಶಕ್ಕೆ ಕಂಟಕಪ್ರಾಯನಾಗಿದ್ದ’ ಎಂದು ಟ್ರಂಪ್‌, ಗುರುವಾರ ಶ್ವೇತ ಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Post Comments (+)