ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗರೇಟಿನ ತುಂಡನ್ನು ತಾಯಿ ಹಕ್ಕಿ ಮರಿಗೆ ಆಹಾರವಾಗಿ ಕೊಟ್ಟಾಗ...!

Last Updated 29 ಜೂನ್ 2019, 17:00 IST
ಅಕ್ಷರ ಗಾತ್ರ

ಪಿನೆಲ್ಲಾಸ್ ಕೌಂಟಿ(ಫ್ಲೋರಿಡಾ): ಫ್ಲೋರಿಡಾದ ಸೇಂಟ್‌ ಪೀಟರ್ಸ್‌ ಕಡಲ ಕಿನಾರೆಯಲ್ಲಿ ಇತ್ತೀಚೆಗೆ ಛಾಯಾಗ್ರಾಹಕರೊಬ್ಬರು ತೆಗೆದ ಚಿತ್ರವೊಂದು ಜಗತ್ತಿನಾದ್ಯಂತ ವೈರಲ್ಲಾಗಿದ್ದಲ್ಲದೇ ಜನರ ಮನಕಲಕುವಂತೆ ಮಾಡಿದೆ.

ಯಾರೋ ಸೇದೆಸೆದ ಸಿಗರೇಟಿನ ತುಂಡನ್ನು ತಾಯಿ ಹಕ್ಕಿಯೊಂದು ತನ್ನ ಮರಿಗೆ ಆಹಾರವೆಂದು ಭಾವಿಸಿ ಬಾಯಿಗಿಟ್ಟ ಘಟನೆಯನ್ನುಕಾರೆನ್‌ ಮ್ಯಾಸೋನ್‌ ಎಂಬ ಮಹಿಳಾ ಛಾಯಾಗ್ರಾಹಕರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಫೊಟೊಗಳನ್ನು ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡು, ಕಡಲತೀರದ ಸ್ವಚ್ಛತೆಯ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಅವರು, ಅದರ ಜತೆಗೆ ತಮ್ಮ ಅಭಿಪ್ರಾಯವನ್ನೂ ದಾಖಲಿಸಿದ್ದಾರೆ. ‘ಪಿನೆಲ್ಲಾಸ್‌ ಕೌಂಟಿ ಬಳಿಯ ಸೇಂಟ್‌ ಪೀಟರ್ಸ್‌ ಸಮುದ್ರ ತೀರದಲ್ಲಿ ತಾಯಿ ಹಕ್ಕಿಯೊಂದು ತನ್ನ ಮರಿಗೆ ಏನನ್ನೋ ಆಹಾರವಾಗಿ ನೀಡುತ್ತಿರುವುದನ್ನು ನಾನು ಗಮನಿಸಿದೆ. ಅದು ಮೀನಲ್ಲ ಎಂದು ನನಗೆ ಸ್ಪಷ್ಟವಾಗಿ ಗೊತ್ತಿತ್ತು. ಆದರೆ, ಏನೆಂದು ತಿಳಿಯುತ್ತಿರಲಿಲ್ಲ. ಆ ಸನ್ನಿವೇಶವನ್ನು ನಾನು ಕ್ಯಾಮೆರಾದಲ್ಲಿ ಸೆರೆ ಹಿಡಿದು, ಮನೆಗೆ ಬಂದು ಫೊಟೊಗಳನ್ನು ಕೂಲಂಕಷವಾಗಿ ನೋಡಿದಾಗ ಮರಿ ಹಕ್ಕಿ ಬಾಯಲ್ಲಿದ್ದದ್ದು ಸಿಗರೇಟಿನ ತುಂಡಾಗಿತ್ತು,’ಎಂದು ಅವರು ಆಘಾತ ವ್ಯಕ್ತಪಡಿಸಿದ್ದಾರೆ.

‘ಒಂದು ವೇಳೆ ನೀವು ಸಿಗರೇಟು ಸೇದುವವರಾದರೆ ಅದನ್ನು ಎಲ್ಲೆಂದರಲ್ಲಿ ಎಸೆದು ಹೋಗಬೇಡಿ,’ ಎಂದು ಅವರು ಧೂಮ ವ್ಯಸನಿಗಳಲ್ಲಿ ಮನವಿ ಮಾಡಿದ್ದಾರೆ.

‘ಈ ಮರಿ ಹಕ್ಕಿಗೆ ಅದರ ತಾಯಿಯೇ ಸಿಗರೇಟು ತುಂಡನ್ನು ಬಾಯಿಗಿಟ್ಟಿತು. ಕಡಲ ತೀರ ಶುಚಿಗೊಳಿಸಲು ಇದು ಸೂಕ್ತ ಸಮಯ. ಅದನ್ನು ನಾವು ಆ್ಯಷ್‌ ಟ್ರೇಯನ್ನಾಗಿ ಮಾಡಿಕೊಳ್ಳುವುದನ್ನು ಬಿಡಬೇಕು,’ ಎಂದು ಅವರು ಒತ್ತಾಯಿಸಿದ್ದಾರೆ.

ಕಾರೆನ್‌ ಮ್ಯಾಸೋನ್‌ ಅವರ ಈ ಪೋಸ್ಟ್‌ ಸಾಮಾಜಿ ತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಪೋಸ್ಟ್‌ ಜಗತ್ತಿನಾದ್ಯಂತ ವೈರಲ್‌ ಆಗಿದೆ. ‘ ಈ ಚಿತ್ರ ಮನ ಕಲಕುತ್ತಿದೆ,’ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

2018ರ ‘ಸಮುದ್ರ ಸಂರಕ್ಷಣೆ ವರದಿ’ ಪ್ರಕಾರ ಕಡಲ ತೀರದಲ್ಲಿ ಹೆಚ್ಚಾಗಿ ದೊರೆಯುವ 10 ತ್ಯಾಜ್ಯ ಪದಾರ್ಥಗಳ ಪೈಕಿ ಸಿಗರೇಟಿನ ತುಂಡು ಮೊದಲ ಸ್ಥಾನದಲ್ಲಿದೆ. ಇದು ಜಲಚರಗಳಿಗೆ ಮಾರಕವಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT