ಸಕಾರಾತ್ಮಕ ಬದಲಾವಣೆಗೆ ಕಾರಣಕರ್ತರಾಗಿ

7
ವಿಶ್ವ ಹಿಂದೂ ಸಮಾವೇಶದಲ್ಲಿ ಸಲಹೆ

ಸಕಾರಾತ್ಮಕ ಬದಲಾವಣೆಗೆ ಕಾರಣಕರ್ತರಾಗಿ

Published:
Updated:
Deccan Herald

ಷಿಕಾಗೊ: ಹಿಂದೂಗಳು ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣರಾಗಬೇಕು ಎಂದು ವಿಶ್ವ ಹಿಂದೂ ಸಮಾವೇಶ ಸಮಾರೋಪದಲ್ಲಿ ಕರೆನೀಡಲಾಗಿದೆ. ಅಲ್ಲದೇ, ಜಾಗತಿಕ ವಲಯದಲ್ಲಿ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಶಾಶ್ವತ ಕಚೇರಿ ಸ್ಥಾಪಿಸಲು ನಿರ್ಧರಿಸಿದೆ.

ಸ್ವಾಮಿ ವಿವೇಕಾನಂದ ಅವರು ಷಿಕಾಗೋದಲ್ಲಿ ಮಾಡಿದ ಐತಿಹಾಸಿಕ ಭಾಷಣದ 125 ವರ್ಷಾಚರಣೆಯ ಸ್ಮರಣಾರ್ಥ ಮೂರು ದಿನಗಳ ಕಾಲ ನಡೆದ ಹಿಂದೂ ಸಮಾವೇಶದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

‘ಅಮೆರಿಕ ಅಥವಾ ಬ್ರಿಟನ್‌ನಲ್ಲಿ ಶಾಶ್ವತ ಕಚೇರಿ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಗಣ್ಯ ವ್ಯಕ್ತಿಗಳು ನೇಮಿಸಲಾಗುತ್ತದೆ’ ಎಂದು ವಿಶ್ವ ಹಿಂದೂ ಸಮಾವೇಶದ ಆಯೋಜಕ ಅಭಯಾ ಅಸ್ಥಾನಾ ಅವರು ತಿಳಿಸಿದರು.

ಅಮೆರಿಕದ ಷಿಕಾಗೊದಲ್ಲಿ ನಡೆದ ವಿಶ್ವ ಹಿಂದೂ ಸಮಾವೇಶದಲ್ಲಿ 60 ದೇಶಗಳ 2,500 ಪ್ರತಿನಿಧಿಗಳು ಭಾಗವಹಿಸಿದ್ದರು.

ಹಿಂದೂ ಸಮಾಜದ ಜಾಗೃತಿ: ಜಾಗತಿಕ ಮಟ್ಟದಲ್ಲಿ ಹಿಂದೂ ಸಮುದಾಯದಲ್ಲಿ ಹೊಸ ಜಾಗೃತಿ ಕಂಡುಬರುತ್ತಿದೆ ಎಂದು ಆರ್‌ಎಸ್‌ಎಸ್‌ನ ಜಂಟಿ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಸಮುದಾಯಕ್ಕೆ ಗುಣಮಟ್ಟ ಹಾಗೂ ರಚನಾತ್ಮಕ ನಾಯಕತ್ವ ಒದಗಿಸುವುದು ಮಾತ್ರವಲ್ಲದೇ, ಶೈಕ್ಷಣಿಕ, ಮಾಧ್ಯಮ, ರಾಜಕೀಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇದೇ ಮಾದರಿ ಅನುಸರಿಸಬೇಕು ಎಂದು ತಿಳಿಸಿದರು.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !