ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್‌ನ ಹಕ್ಕುಗಳನ್ನು ರಕ್ಷಿಸಿ: ಮರ್ಕೆಲ್‌

Last Updated 6 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬೀಜಿಂಗ್‌(ಎಪಿ): ಹಾಂಗ್‌ಕಾಂಗ್‌ ಜನರ ಸ್ವಾತಂತ್ರ್ಯಮತ್ತು ಹಕ್ಕುಗಳನ್ನು ರಕ್ಷಿಸಬೇಕು ಎಂದು ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಅವರು ಚೀನಾವನ್ನು ಆಗ್ರಹಿಸಿದ್ದಾರೆ.

‘ಹಾಂಗ್‌ಕಾಂಗ್‌ನಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಮತ್ತು ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಬೇಕು’ ಎಂದೂ ಅವರು ಹೇಳಿದ್ದಾರೆ.

ಇಲ್ಲಿಗೆ ಶುಕ್ರವಾರ ಭೇಟಿ ನೀಡಿರುವ ಮರ್ಕೆಲ್‌ ಅವರು ಚೀನಾದ ಪ್ರಧಾನಿ ಲಿ ಕೆಕಿಯಾಂಗ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಧ್ಯಕ್ಷ ಷಿ ಜಿಂಗ್‌ಪಿಂಗ್‌ ಅವರನ್ನೂ ಭೇಟಿಯಾಗುವರು.

ಜರ್ಮನಿಯ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿರುವ ಚೀನಾದ ಜೊತೆ ಆರ್ಥಿಕತೆ ಕುರಿತ ಚರ್ಚೆ ನಡೆಸುವಾಗ ಮಾನವಹಕ್ಕುಗಳ ರಕ್ಷಣೆ ಬಗೆಗಿನ ಕಾಳಜಿಯನ್ನೂ ಪ್ರಸ್ತಾಪಿಸುವ ಸವಾಲು ಮರ್ಕೆಲ್‌ಗೆ ಎದುರಾಗಿದೆ.

ಜರ್ಮನ್‌ನ ಉನ್ನತ ಮಟ್ಟದ ವ್ಯಾಪಾರಿ ನಿಯೋಗ ಕೂಡ ಮರ್ಕೆಲ್‌ ಜೊತೆಗೆ ಚೀನಾಕ್ಕೆ ಭೇಟಿ ನೀಡಿದೆ.

ಸರ್ವಾಧಿಕಾರಿ ಧೋರಣೆಯ ರಾಷ್ಟ್ರದ ಜೊತೆ ವ್ಯವಹಾರ ನಡೆಸುವಾಗ ಎಚ್ಚರ ಇರಲಿ ಎಂದು ಹಾಂಗ್‌ಕಾಂಗ್‌ನ ಹೋರಾಟಗಾರರು ಮರ್ಕೆಲ್‌ ಅವರಿಗೆ ಬರೆದಿರುವ ಬಹಿರಂಗ ಪತ್ರವನ್ನು ಈಚೆಗೆ ಜರ್ಮನಿಯ ಪತ್ರಿಕೆಯೊಂದು ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT