ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಾರರಿದ್ದ ವಿ.ವಿ ವಶಕ್ಕೆ

ಹಾಂಗ್‌ಕಾಂಗ್‌: ಅಪಾಯಕಾರಿ ವಸ್ತು ವಶಪಡಿಸಿಕೊಂಡ ಪೊಲೀಸರು
Last Updated 28 ನವೆಂಬರ್ 2019, 19:19 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌ : ಪ್ರಜಾಪ್ರಭುತ್ವ ಪರ ಹೋರಾಟಗಾರರಿದ್ದ ವಿಶ್ವವಿದ್ಯಾಲಯದ ಆವರಣದೊಳಗೆ ಪೊಲೀಸರು ಗುರುವಾರ ಪ್ರವೇಶಿಸಿ, ಪೆಟ್ರೋಲ್‌ ಬಾಂಬ್‌ಗಳು ಹಾಗೂ ಇತರೆ ಅಪಾಯಕಾರಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಪಾಲಿಟೆಕ್ನಿಕ್‌ ವಿಶ್ವವಿದ್ಯಾಲಯದ ಆವರಣ ಹಿಂಸಾತ್ಮಕ ಪ್ರತಿಭಟನೆಯ ಕೇಂದ್ರಬಿಂದುವಾಗಿತ್ತು. ನವೆಂಬರ್‌ 17 ರಂದು ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಬಿಲ್ಲು ಮತ್ತು ಬಾಣಗಳು, ಪೆಟ್ರೋಲ್‌ ಬಾಂಬ್‌ಗಳೊಂದಿಗೆ ಘರ್ಷಣೆ ನಡೆದಿತ್ತು. ವಿಶ್ವವಿದ್ಯಾಲಯದ ಬಾಗಿಲನ್ನು ತೆರೆದು ಒಳನುಗ್ಗಿದ ಪೊಲೀಸರು, ಘರ್ಷಣೆಗೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಶ್ವವಿದ್ಯಾಲಯದ ಆವರಣವನ್ನು ಪೊಲೀಸರು ಪ್ರವೇಶಿಸುತ್ತಿದ್ದಂತೆ, ಅಲ್ಲಿದ್ದ ನೂರಾರು ಜನ ಪ್ರತಿಭಟನಕಾರರು ಓಡಿಹೋದರು. ಕೆಲವರು ಪೊಲೀಸರಿಂದ ಬೆತ್ತದ ರುಚಿ ಅನುಭವಿಸಿದರು. ಇಡೀ ಆವರಣ ಪೊಲೀಸರಿಂದ ತುಂಬಿದೆ. ಪ್ರತಿಭಟನೆ ಸಂದರ್ಭದಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಹತೋಟಿಗೆ ಬಂದಿದೆ.

ಟ್ರಂಪ್‌ ಸಹಿ

ವಾಷಿಂಗ್ಟನ್‌ (ಪಿಟಿಐ): ಹಾಂಗ್‌ಕಾಂಗ್‌ನಲ್ಲಿನ ಪ್ರಜಾಪ್ರಭುತ್ವಪರ ಹೋರಾಟಗಾರರನ್ನು ಬೆಂಬಲಿಸುವ ಮಸೂದೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಕ್ಕೆ ಚೀನಾ ಆಕ್ರೋಶ ವ್ಯಕ್ತಪಡಿಸಿದೆ. ಈ ನಡೆಗೆ ತಕ್ಕ ಪ್ರತ್ಯುತ್ತರ ಎದುರಿಸಬೇಕಾಗುತ್ತದೆ ಎಂದು ಅಮೆರಿಕಕ್ಕೆ ಚೀನಾ ಗುರುವಾರ ಎಚ್ಚರಿಕೆ ನೀಡಿದೆ. ಈ ಮಸೂದೆಯನ್ನು ಕಳೆದ ವಾರ ಸಂಸತ್‌ನಲ್ಲಿ ಮಂಡಿಸಲಾಗಿತ್ತು. ಒಬ್ಬ ಸಂಸದರನ್ನು ಹೊರತುಪಡಿಸಿ, ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT