ಗುರುವಾರ , ಅಕ್ಟೋಬರ್ 17, 2019
24 °C

ಹಾಂಗ್‌ಕಾಂಗ್‌: ಇಂದು ಪ್ರತಿಭಟನೆಗೆ ಅವಕಾಶವಿಲ್ಲ

Published:
Updated:

ಹಾಂಗ್‌ಕಾಂಗ್‌(ಎಪಿ): ಚೀನಾದ 70ನೇ ಸಂಸ್ಥಾಪನಾ ದಿನವಾದ ಅಕ್ಟೋಬರ್‌ 1ರಂದು ಪ್ರತಿಭಟನಾ ರ್‍ಯಾಲಿ ಆಯೋಜಿಸುವ  ಪ್ರಜಾಪ್ರಭುತ್ವ ಪರ ಹೋರಾಟಗಾರರ ಮನವಿಯನ್ನು ಹಾಂಗ್‌ಕಾಂಗ್‌ ಅಧಿಕಾರಿಗಳು ತಿರಸ್ಕರಿಸಿದ್ದಾರೆ. 

ಚೀನಾದ ಅರೆ ಸ್ವಾಯತ್ತ ಪ್ರದೇಶವಾದ ಹಾಂಗ್‌ಕಾಂಗ್‌ನಲ್ಲಿ ಶನಿವಾರ ಹಾಗೂ ಭಾನುವಾರ ನಡೆದ ಪ್ರತಿಭಟನಾ ರ್‍ಯಾಲಿ ಸಂದರ್ಭದಲ್ಲಿ ಅಹಿತಕರ ಘಟನೆಗಳು ಸಂಭವಿಸಿದ್ದವು. ಪೊಲೀಸರು ಹಾಗೂ ಹೋರಾಟಗಾರರ ನಡುವೆ ಘರ್ಷಣೆ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರದ ರ್‍ಯಾಲಿಗೆ ಪೊಲೀಸರು ಒಪ್ಪಿಗೆ ನೀಡಿರಲಿಲ್ಲ. ಈ ನಿರ್ಣಯವನ್ನು ಹಾಂಗ್‌ಕಾಂಗ್‌ ಮಂಡಳಿಯೂ ಎತ್ತಿಹಿಡಿದಿದೆ. ‘ರ್‍ಯಾಲಿ ನಿಷೇಧಿಸಿದರೂ ಈ ಹಿಂದಿನಂತೆ ಜನರು ಆಗಮಿಸಲಿದ್ದಾರೆ. ಇದು ಹಿಂಸೆಗೆ ಕಾರಣವಾಗಬಹುದು’ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ. 

ಹೋರಾಟಗಾರರ ಬಂಧನ: ‘ಮಂಗಳವಾರ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪೊಲೀಸರು ಹೋರಾಟಗಾರರು, ನಟರನ್ನು ಸೋಮವಾರ ಮುಂಜಾನೆಯೇ ಬಂಧಿಸಿದ್ದಾರೆ’ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. 

Post Comments (+)