ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೌಡಿ ಮೋದಿ’ ಸಭೆಗೆ 40 ಸಾವಿರ ಮಂದಿ ನೋಂದಣಿ

ಹ್ಯೂಸ್ಟನ್‌ನಲ್ಲಿ ಸೆ. 22ಕ್ಕೆ ಮೋದಿ ಭಾಷಣ
Last Updated 14 ಆಗಸ್ಟ್ 2019, 13:56 IST
ಅಕ್ಷರ ಗಾತ್ರ

ಹ್ಯೂಸ್ಟನ್ : ಸೆಪ್ಟೆಂಬರ್ 22ರಂದು ಹ್ಯೂಸ್ಟನ್‌ನಲ್ಲಿ ನಡೆಯಲಿರುವ ‘ಹೌಡಿ ಮೋದಿ’ ಭಾರತ–ಅಮೆರಿಕ ಸಮುದಾಯಗಳ ಶೃಂಗಸಭೆಗೆ ಸುಮಾರು 40 ಸಾವಿರ ಜನರು ತಮ್ಮ ಹೆಸರು ನೋಂದಾಯಿಸಿದ್ದಾರೆ.

ಸೆ. 22ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸುತ್ತಿರುವ ಮೋದಿ, ಅಂದು ಹ್ಯೂಸ್ಟನ್‌ನ ‘ಹೌಡಿ ಮೋದಿ‘ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. ‘ಹೌಡಿ’ ಎನ್ನುವುದು ‘ಹೌ ಡು ಯು ಡು’ (ನೀವು ಹೇಗಿದ್ದೀರಿ?) ಎನ್ನುವುದರ ಸಂಕ್ಷಿಪ್ತ ರೂಪ. ನೈರುತ್ಯ ಅಮೆರಿಕದಲ್ಲಿ ಸ್ನೇಹಿತರನ್ನು ಭೇಟಿಯಾದಾಗ ಸಾಮಾನ್ಯವಾಗಿ ಬಳಕೆಯಾಗುವ ಪದವಿದು.

ಶೃಂಗಸಭೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಈಚೆಗಷ್ಟೇ ಪಾಸುಗಳನ್ನು ವಿತರಿಸಲಾಗುತ್ತಿದೆ ಎಂದು ಹ್ಯೂಸ್ಟನ್‌ನಲ್ಲಿ ಶೃಂಗಸಭೆ ಆಯೋಜಿಸಿರುವ ಟೆಕ್ಸಾಸ್ ಇಂಡಿಯಾ ಫೋರಂ ತಿಳಿಸಿದೆ. ಹ್ಯೂಸ್ಟನ್‌ನ ಎನ್‌ಆರ್‌ಜಿ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ‘ಹೌಡಿ ಮೋದಿ’ ಸಭೆಗೆ ಸುಮಾರು 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಹ್ಯೂಸ್ಟನ್‌ನಲ್ಲಿ ಅಮೆರಿಕ ಮತ್ತು ಭಾರತೀಯ ಮೂಲದ ಸುಮಾರು 5 ಲಕ್ಷದಷ್ಟು ಜನಸಂಖ್ಯೆಯಿದೆ.

‘ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಕಾಯುತ್ತಿದ್ದೇನೆ. ಈ ನಗರ ಅಮೆರಿಕದಲ್ಲಿರುವ ಭಾರತೀಯರಿಗೆ ತವರುಮನೆ ಇದ್ದಂತೆ’ ಎಂದು ಹ್ಯೂಸ್ಟನ್ ಮೇಯರ್ಸಿಲ್ವೆಸ್ಟರ್ ಟರ್ನರ್ ಹೇಳಿದ್ದಾರೆ.

ಪ್ರಧಾನಿ ಮೋದಿ ಭಾಷಣಕ್ಕೂ ಮುನ್ನ ‘ಕನಸುಗಳನ್ನು ಹಂಚಿಕೊಳ್ಳಿ, ಉಜ್ವಲ ಭವಿಷ್ಯಕ್ಕಾಗಿ’ ಎನ್ನುವ ಶೀರ್ಷಿಕೆಯ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ ಎಂದು ‘ಹೌಡಿ ಮೋದಿ’ ಆಯೋಜಕರು ಮಾಹಿತಿ ನೀಡಿದ್ದಾರೆ.

2014ರಲ್ಲಿ ಮೋದಿ ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಭಾಷಣ ಮಾಡಿದ್ದರು. ನಂತರ 2016ರಲ್ಲಿ ಸಿಲಿಕಾನ್ ವ್ಯಾಲಿಯಲ್ಲಿ ಭಾಷಣ ಮಾಡಿದ್ದರು. ಎರಡೂ ಕಡೆ 20 ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT