ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರೇ, ನನ್ನ ಸಹೋದರನ ಕೊಂದ ಪೊಲೀಸ್‌ ಅಧಿಕಾರಿಯನ್ನು ತಬ್ಬಿಕೊಳ್ಳಲೇ...

Last Updated 5 ಅಕ್ಟೋಬರ್ 2019, 4:37 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ನ್ಯಾಯಾಧೀಶರೇ, ನನ್ನ ಸಹೋದರನನ್ನು ಗುಂಡಿಕ್ಕಿಕೊಂದು ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಮಹಿಳಾ ಪೊಲೀಸ್‌ ಅಧಿಕಾರಿಯನ್ನು ತಬ್ಬಿಕೊಳ್ಳಲುದಯವಿಟ್ಟು ಅವಕಾಶ ಕೊಡಿ ಎಂದುಯುವಕಬ್ರಾಂಟ್‌ ಜೀನ್‌ ಕೇಳಿದಾಗ ಇಡೀ ಕೋರ್ಟ್‌ಕೆಲ ಹೊತ್ತು ಭಾವುಕತೆಗೆ ಜಾರಿತು.

ಈ ಮನಕಲಕುವ ಘಟನೆ ನಡೆದಿರುವುದ ಅಮೆರಿಕದ ಟೆಕ್ಸಾಸ್‌ನ ಸ್ಥಳೀಯ ನ್ಯಾಯಾಲಯದಲ್ಲಿ.ಅಪರಾಧಿ ಅಧಿಕಾರಿಯನ್ನು ತಬ್ಬಿಕೊಂಡ ಬ್ರಾಂಟ್‌ ಜೀನ್‌ ವರ್ಣಭೇದ ಮರೆತು ನಾವು ಮಾನವೀಯತೆಯ ಜೀವನ ನಡೆಸಬೇಕು ಎಂದು ಹೇಳಿದ್ದಾರೆ. ಜೈಲು ಶಿಕ್ಷೆಗೆಗುರಿಯಾಗಿರುವ ಶ್ವೇತ ವರ್ಣಿಯಪೊಲೀಸ್‌ ಅಧಿಕಾರಿಅಂಬರ್‌ ಗೈಂಗರ್‌ಕಪ್ಪು ವರ್ಣಿಯಬ್ರಾಂಟ್‌ ಜೀನ್‌ ಸಹೋದರಬೋಥಮ್‌ ಜೀನ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ನ್ಯಾಯಾಲಯದಲ್ಲಿ ತೀರ್ಪು ಹೊರ ಬಿದ್ದ ಬಳಿಕಅಂಬರ್‌ ಗೈಂಗರ್‌ ಮತ್ತು ಬ್ರಾಂಟ್‌ ಜೀನ್‌ ತಬ್ಬಿಕೊಂಡಿರುವ ವಿಡಿಯೊಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

2018ರ ಸೆಪ್ಟೆಂಬರ್‌ ತಿಂಗಳಲ್ಲಿ ಡಲ್ಲಾಸ್‌ನಲ್ಲಿ ಕಪ್ಪು ವರ್ಣಿಯರು ಪೊಲೀಸ್‌ ದೌರ್ಜನ್ಯ ಖಂಡಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಅಂಬರ್‌ ಗೈಂಗರ್‌ ಡಲ್ಲಾಸ್‌ನಲ್ಲಿಪೊಲೀಸ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ತಾವು ತಂಗಿದ್ದ ಅಪಾರ್ಟ್‌ಮೆಂಟ್‌ ಎದುರೇ ಕಪ್ಪು ವರ್ಣಿಯರು ಪ್ರತಿಭಟನೆ ನಡೆಸುತ್ತಿದ್ದರು. ಇದರ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿಬೋಥಮ್‌ ಜೀನ್‌ ಹಾಗೂಬ್ರಾಂಟ್‌ ಜೀನ್‌ ಅವರಕುಟುಂಬ ನೆಲೆಸಿತ್ತು.

ಒಂದು ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಅಂಬರ್‌ ಗೈಂಗರ್‌ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ವೇಳೆ ಕೆಲ ಪ್ರತಿಭಟನಾ ನಿರತರು ಅಪಾರ್ಟ್‌ಮೆಂಟ್‌ ಪ್ರವೇಶಿಸಲು ಯತ್ನಿಸಿದ್ದರು. ಇದನ್ನು ತಡೆಯಲುಅಂಬರ್‌ ಗೈಂಗರ್‌ ಪಕ್ಕದ ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸಿದ್ದರು. ಫ್ಲ್ಯಾಟ್‌ನಲ್ಲಿಐಸ್‌ ಕ್ರೀಮ್‌ ತಿನ್ನುತ್ತ ಟಿ.ವಿ ನೋಡುತ್ತಿದ್ದಬೋಥಮ್‌ ಜೀನ್‌ ಕೂಡಪ್ರತಿಭಟನಾಕಾರನಿರಬೇಕುಎಂದು ತಪ್ಪಾಗಿ ತಿಳಿದುಗುಂಡು ಹಾರಿಸಿದ್ದರು. ವಿಚಾರಣೆ ವೇಳೆತಪ್ಪು ಒಪ್ಪಿಕೊಂಡಿದ್ದ ಅಂಬರ್‌ ಗೈಂಗರ್‌ಗೆನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಕೋರ್ಟ್‌ ಹಾಲ್‌ನಲ್ಲಿ ನ್ಯಾಯಾಧೀಶರು ತೀರ್ಪು ಓದಿದ ಬಳಿಕ ಬ್ರಾಂಟ್‌ ಜೀನ್‌,ನ್ಯಾಯಾಧೀಶರೇ, ನನ್ನ ಸಹೋದರನಕೊಂದ ಆಪೊಲೀಸ್‌ ಅಧಿಕಾರಿಯನ್ನು ತಬ್ಬಿಕೊಳ್ಳಲು ಅನುಮತಿ ನೀಡಿ ಎಂದಿದ್ದರು. ನಂತರ ಮಾತನಾಡಿದ್ದ ಬ್ರಾಂಟ್‌ ಜೀನ್‌‘ನೀವು ಜೈಲಿಗೆ ಹೋಗುವುದನ್ನು ಸಹ ನಾನು ಬಯಸುವುದಿಲ್ಲ… ಒಬ್ಬ ವ್ಯಕ್ತಿಯಂತೆ ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಾನು ನಿಮ್ಮ ಮೇಲೆ ಕೆಟ್ಟದ್ದನ್ನು ಬಯಸುವುದಿಲ್ಲ ಎಂದಿದ್ದರು. ಬಳಿಕ ನ್ಯಾಯಾಧೀಶರನ್ನು ಉದ್ದೇಶಿಸಿ,ಇದು ಸಾಧ್ಯವೇ ಎಂಬುದು ನನಗೆ ಗೊತ್ತಿಲ್ಲ, ಆದರೆ ನಾನು ಅವರನ್ನು ತಬ್ಬಿಕೊಳ್ಳಬಹುದೇ, ದಯವಿಟ್ಟು, ದಯವಿಟ್ಟು‘ ಎಂದು ಕೇಳಿದ್ದರು.

ನ್ಯಾಯಾಧೀಶರು ಪರಸ್ಪರರಿಗೆ ತಬ್ಬಿಕೊಳ್ಳಲು ಅನುಮತಿ ನೀಡಿದ್ದರು. ಕಂಬನಿ ಮಿಡಿಯುತ್ತಲ್ಲೇ ಓಡಿ ಬಂದಅಂಬರ್‌ ಗೈಂಗರ್‌ ಅವರುಬ್ರಾಂಟ್‌ ಜೀನ್‌ನನ್ನು ತಬ್ಬಿಕೊಂಡರು. ಈ ವೇಳೆ ನ್ಯಾಯಾಲಯವೇ ಕೆಲ ಕ್ಷಣ ಸ್ತಬ್ಧವಾಗಿತ್ತು, ಅಲ್ಲಿ ಇದ್ದವರು ಭಾವುಕರಾಗಿದ್ದರು.ನ್ಯಾಯಾಧೀಶರ ಕಣ್ಣಂಚಿನಲ್ಲೂ ನೀರು ಜಿನುಗುತ್ತಿತ್ತು.

ಈ ಘಟನೆ ನಡೆದ ಬಳಿಕ ಡಲ್ಲಾಸ್‌ನಲ್ಲಿ ಜನಾಂಗೀಯ ದ್ವೇಷ ಹೆಚ್ಚಾಗಿತ್ತು. ಈ ಘಟನೆ ಕುರಿತಂತೆ ಅಮೆರಿಕದಲ್ಲಿ ಕಪ್ಪು ಯುವಕರಿಗೆ ಸುರಕ್ಷಿತವಾದ ಸ್ಥಳ ಇದೆಯೇ ಎಂದು ಪ್ರಶ್ನೆ ಮಾಡುವ ಮೂಲಕ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆ ಈ ಘಟನೆಯನ್ನು ಖಂಡಿಸಿತ್ತು.

ಬ್ರಾಂಟ್‌ ಜೀನ್‌ ಅವರ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಅನುವಾದ: ಪೃಥ್ವಿರಾಜ್‌ ಎಂ.ಎಚ್‌

ಆಧಾರ: ವಿವಿಧ ಮೂಲಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT