ಮಂಗಳವಾರ, ಸೆಪ್ಟೆಂಬರ್ 24, 2019
29 °C
ಹಣಕಾಸು ಬಿಕ್ಕಟ್ಟು, ದುರ್ಬಲ ಮತ್ತು ಅಸಮತೋಲನ ಪ್ರಗತಿ

ಪಾಕಿಸ್ತಾನಕ್ಕೆ ಐಎಂಎಫ್‌ ತಂಡ

Published:
Updated:
Prajavani

ಇಸ್ಲಾಮಾಬಾದ್‌ (ಪಿಟಿಐ): ತೀವ್ರ ಹಣಕಾಸು ಬಿಕ್ಕಟ್ಟು ಹಾಗೂ ಅಸ ಮತೋಲನದಿಂದ ಕೂಡಿದ ಅಭಿವೃದ್ಧಿ ಯಿಂದ ತತ್ತರಿಸಿರುವ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ತಜ್ಞರ ತಂಡವೊಂದನ್ನು ಕಳುಹಿಸಲು ನಿರ್ಧರಿಸಿದೆ.

‘ಸೆ. 16ರಿಂದ 20ರ ವರೆಗೆ ಪಾಕಿಸ್ತಾನದಲ್ಲಿ ವಾಸ್ತವ್ಯ ಹೂಡುವ ತಂಡ, ಹಣಕಾಸು ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಿ, ಪರಿಹಾರೋಪಾಯಗಳ ಬಗ್ಗೆ ಸಲಹೆ ನೀಡಲಿದೆ ಎಂಬ ಐಎಂಎಫ್‌ನ ಪಾಕಿಸ್ತಾನ ಶಾಖೆಯ ಮುಖ್ಯಸ್ಥರಾದ ತೆರೇಸಾ ದಬಾನ್‌ ಸ್ಯಾಂಚೇಸ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ
‘ದಿ ನ್ಯೂಸ್‌ ಇಂಟರ್‌ನ್ಯಾಷನಲ್‌’ ವರದಿ ಮಾಡಿದೆ.

Post Comments (+)