ಹೆಲಿಕಾಪ್ಟರ್‌ ದುರುಪಯೋಗ ಆರೋಪ: ಇಮ್ರಾನ್‌ಖಾನ್‌ಗೆ ಸಮನ್ಸ್‌

7

ಹೆಲಿಕಾಪ್ಟರ್‌ ದುರುಪಯೋಗ ಆರೋಪ: ಇಮ್ರಾನ್‌ಖಾನ್‌ಗೆ ಸಮನ್ಸ್‌

Published:
Updated:

ಪೆಶಾವರ: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿರುವ ಇಮ್ರಾನ್‌ಖಾನ್‌ ವಿರುದ್ಧ ಸರ್ಕಾರದ ಹೆಲಿಕಾಪ್ಟರ್‌ಗಳನ್ನು ದುರುಪಯೋಗಪಡಿಸಿಕೊಂಡು ಬೊಕ್ಕಸಕ್ಕೆ ನಷ್ಟವನ್ನು ಉಂಟು ಮಾಡಿದ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಆಗಸ್ಟ್‌ 7ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಷನಲ್‌ ಅಕೌಂಟೆಬಿಲಿಟಿ ಬ್ಯುರೊ (ಎನ್‌ಎಬಿ) ಇಮ್ರಾನ್‌ಖಾನ್‌ಗೆ ಸಮನ್ಸ್‌ ಜಾರಿ ಮಾಡಿದೆ.

ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಇಮ್ರಾನ್‌ಖಾನ್‌ರ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಪಕ್ಷ 2013ರ ವರೆಗೆ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಇಮ್ರಾನ್‌ಖಾನ್‌, ಸರ್ಕಾರದ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡಿದ್ದರಿಂದ ಬೊಕ್ಕಸಕ್ಕೆ ₹ 20 ಲಕ್ಷ ನಷ್ಟ ಉಂಟಾಗಿದೆ ಎಂದು ಎನ್ಎಬಿ ಆರೋಪಿಸಿದೆ ಎಂದು ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿದೆ.

ಇದೇ ವಿಷಯವಾಗಿ ವಿಚಾರಣೆಗೆ ಜುಲೈ 18ರಂದು ಹಾಜರಾಗುವಂತೆ ಎನ್‌ಎಬಿ ಸಮನ್ಸ್‌ ಜಾರಿ ಮಾಡಿತ್ತು. ಚುನಾವಣೆ ನೆಪವೊಡ್ಡಿದ್ದ ಇಮ್ರಾನ್‌ಖಾನ್‌ ಅಂದು ವಿಚಾರಣೆಗೆ ಹಾಜರಾಗಿರಲಿಲ್ಲ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !