ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ದಿನದಂದೆ ಇಮ್ರಾನ್‌ ಖಾನ್‌ ಪ್ರಮಾಣವಚನ?

7

ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ದಿನದಂದೆ ಇಮ್ರಾನ್‌ ಖಾನ್‌ ಪ್ರಮಾಣವಚನ?

Published:
Updated:
Deccan Herald

ಇಸ್ಲಾಮಾಬಾದ್‌ : ಸ್ವಾತಂತ್ರ್ಯ ದಿನದಂದೇ ( ಆಗಸ್ಟ್ 14) ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಡಾನ್‌ ನಿಯತಕಾಲಿಕೆ ವರದಿ ಮಾಡಿದೆ.

ಜುಲೈ 25ರಂದು ರಾಷ್ಟ್ರೀಯ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಫಲಿತಾಂಶದ ಬಳಿಕ ಮಾತನಾಡಿದ್ದ ಅವರು, ಇದೇ ಆಗಸ್ಟ್ 11 ರಂದು ‍ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವುದಾಗಿ ತಿಳಿಸಿದ್ದರು.

‘ನೂತನ ಪ್ರಧಾನಿಯು ಆಗಸ್ಟ್‌ 14ರಂದು ಪ್ರಮಾಣವಚನ ಸ್ವೀಕರಿಸಬೇಕು ಎಂಬುದು ಹಂಗಾಮಿ ಪ್ರಧಾನಿ ನಸಿರುಲ್‌ ಮುಲ್ಕ್‌ ಹಾಗೂ ನನ್ನ ಇಚ್ಚೆಯೂ ಆಗಿದೆ’ ಎಂದು ಹಂಗಾಮಿ ಕಾನೂನು ಸಚಿವ ಅಲಿ ಜಫರ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 5

    Happy
  • 0

    Amused
  • 0

    Sad
  • 0

    Frustrated
  • 2

    Angry

Comments:

0 comments

Write the first review for this !