ಭಾರತ ಎನ್‌ಎಸ್‌ಜಿ ಸೇರಲು ಚೀನಾ ತಕರಾರು

7
ಅಮೆರಿಕದ ಹಿರಿಯ ಅಧಿಕಾರಿ ಹೇಳಿಕೆ

ಭಾರತ ಎನ್‌ಎಸ್‌ಜಿ ಸೇರಲು ಚೀನಾ ತಕರಾರು

Published:
Updated:

ವಾಷಿಂಗ್ಟನ್‌ (ಪಿಟಿಐ): ‘ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ (ಎನ್‌ಎಸ್‌ಜಿ) ಭಾರತವನ್ನು ಸೇರಿಸಲು ವಿಟೊ ಅಧಿಕಾರ ಹೊಂದಿರುವ ಚೀನಾ ತಕರಾರು ತೆಗೆದಿದೆ’ ಎಂದು ಅಮೆರಿಕ ಆರೋಪಿಸಿದೆ.

48 ಸದಸ್ಯರಾಷ್ಟ್ರಗಳನ್ನು ಹೊಂದಿರುವ ಎನ್‌ಎಸ್‌ಜಿ, ಪರಮಾಣು ವ್ಯಾಪಾರ ಹಾಗೂ ವ್ಯವಹಾರಗಳನ್ನು ನಿಯಂತ್ರಿಸುತ್ತದೆ. 

‘ಭಾರತವನ್ನು ಎನ್‌ಎಸ್‌ಜಿಗೆ ಸೇರ್ಪಡೆಗೊಳಿಸಲು ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಬೆಂಬಲ ಸೂಚಿಸುತ್ತಿವೆ. ಆದರೆ ಪರಮಾಣು ಪ್ರಸರಣ ಮಾಡದಿರುವ ಒಡಂಬಡಿಕೆಗೆ (ಎನ್‌ಪಿಟಿ) ಭಾರತ ಸೇರಿದಂತೆ ಹೊಸ ಸದಸ್ಯರಾಷ್ಟ್ರಗಳು ಸಹಿಹಾಕಬೇಕು ಎಂದು ಚೀನಾ ಪಟ್ಟುಹಿಡಿದಿದೆ. ಇದೇ ಕಾರಣದಿಂದ ಭಾರತವನ್ನು ಸೇರ್ಪಡೆಗೊಳಿಸುವುದು ವಿಳಂಬವಾಗುತ್ತಿದೆ’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಮಧ್ಯ ಏಷ್ಯಾ ವಿಭಾಗದ ಸಹಾಯಕ ಕಾರ್ಯದರ್ಶಿ ಅಲೈಸ್‌ ವೆಲ್ಸ್‌ ತಿಳಿಸಿದ್ದಾರೆ.

‘ಎನ್‌ಎಸ್‌ಜಿಯೂ ಒಮ್ಮತದ ಅಭಿಪ್ರಾಯದ ಮೇರೆಗೆ ಕಾರ್ಯನಿರ್ವಹಿಸುವುದರಿಂದ ಕಷ್ಟದ ಸ್ಥಿತಿಗೆ ತಲುಪಲಾಗಿದೆ. ಎನ್‌ಪಿಟಿ ಒಡಂಬಡಿಕೆಗೆ ಭಾರತ ಸಹಿಹಾಕುವುದಿಲ್ಲ ಎಂದು ತಿಳಿಸಿದೆ. ಚೀನಾದ ವಿರೋಧದ ಕಾರಣ ಭಾರತಕ್ಕೆ ಸದಸ್ಯತ್ವ ಸಿಗುವುದು ಅನುಮಾನ ’ ಎಂದು ಅವರು ತಿಳಿಸಿದರು.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !