ಭಾರತ–ಪಾಕ್ ನಡುವಿನ ಶಾಂತಿ ಸ್ಥಾಪನೆಯೇ ವಾಜಪೇಯಿಗೆ ನೀಡುವ ಗೌರವ: ಇಮ್ರಾನ್ ಖಾನ್ 

7

ಭಾರತ–ಪಾಕ್ ನಡುವಿನ ಶಾಂತಿ ಸ್ಥಾಪನೆಯೇ ವಾಜಪೇಯಿಗೆ ನೀಡುವ ಗೌರವ: ಇಮ್ರಾನ್ ಖಾನ್ 

Published:
Updated:

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಕಾಯ್ದುಕೊಳ್ಳುವಂತೆ ಮಾಡುವುದು ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನೀಡುವ ಗೌರವ ಎಂದು ಪಾಕಿಸ್ತಾನ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ ಅಭಿಪ್ರಾಯಪಟ್ಟಿದ್ದಾರೆ. 

ಇಡೀ ಖಂಡದಲ್ಲಿ ವಾಜಪೇಯಿ ರಾಷ್ಟ್ರ ರಾಜಕಾರಣದ ಗೌರವಾನ್ವಿತ ಮೇರು ವ್ಯಕ್ತಿ. ಪಾಕಿಸ್ತಾನ–ಭಾರತದ ನಡುವೆ ಸೌಹಾರ್ದತೆ ಬೆಳೆಸಲು ನಡೆಸಿದ ಪ್ರಯತ್ನಗಳು ನೆನಪಿನ ಬತ್ತಳಿಕೆಯಲ್ಲಿರುವಂತಹವು. ಅವರು ವಿದೇಶಾಂಗ ಸಚಿವರಾಗಿದ್ದಾಗ ಇಂಡೋ–ಪಾಕ್‌ ನಡುವಿನ ನಂಟನ್ನು ಬೆಸೆಯಲು ಯತ್ನಿಸಿದ್ದರು. ಪ್ರಧಾನ ಮಂತ್ರಿಯಾಗಿದ್ದಾಗಲೂ ಇಂಡೋ–ಪಾಕ್ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಿದ್ದರು. ನಮ್ಮಲ್ಲಿ ರಾಜಕೀಯ ಭಿನ್ನತೆಗಳಿವೆ ಆದರೆ ಎರಡು ದೇಶಗಳ ಉದ್ದೇಶ ಶಾಂತಿ ಸ್ಥಾಪನೆ. ಇದನ್ನು ಈಡೇರಿಸುವುದು ವಾಜಪೇಯಿ ಅವರಿಗೆ ನೀಡುವ ಗೌರವ. ವಾಜಪೇಯಿ ನಿಧನದಿಂದ ದುಃಖಸಾಗರದಲ್ಲಿ ಮುಳುಗಿರುವ ಭಾರತ ಜತೆ ನಾವಿದ್ದೇವೆ  ಎಂದು ಇಮ್ರಾನ್ ಹೇಳಿದ್ದಾರೆ. 

ಭಾರತ ಪಾಕಿಸ್ತಾನದ ನಡುವೆ ಬದಲಾವಣೆ ತರುವುದಕ್ಕಾಗಿ ಶ್ರಮಿಸಿದ, ಸಾರ್ಕ್‌ನಲ್ಲಿ ಬೆಂಬಲ ನೀಡಿದ, ದೇಶದ ಬೆಳವಣಿಗೆಗೆ ಪ್ರಾದೇಶಿಕ ಸಹಕಾರ ನೀಡಿದ ಹೆಸರಾಂತ ವಾಜಪೇಯಿ ಅವರಿಂದ ಸಾಕಷ್ಟು ಕಲಿತಿದ್ದೇವೆ. ಪಾಕಿಸ್ತಾನ ಸರ್ಕಾರ ಹಾಗೂ ಇಡೀ ದೇಶದ ಜನತೆ ವಾಜಪೇಯಿ ಕುಟುಂಬ ಹಾಗೂ ದೇಶಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೇಳುತ್ತೇವೆ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಹೇಳಿಕೆ ನೀಡಿದೆ. 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !