ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸ ಕೈಬಿಡಲು ಪ್ರತಿಭಟನಾಕಾರರ ಮೇಲೆ ಒತ್ತಡ

Last Updated 29 ಜುಲೈ 2019, 20:01 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ‘ಅಮೆರಿಕದಲ್ಲಿ ಆಶ್ರಯ ಬಯಸಿ ಉಪವಾಸ ಮಾಡುತ್ತಿರುವ ಮೂವರು ಭಾರತೀಯರಿಗೆ ಒತ್ತಾಯ ಪೂರ್ವಕವಾಗಿ ನೀರು ಕುಡಿಸಲಾಗಿದೆ’ ಎಂದು ಅವರ ಪರ ವಕೀಲೆ ಲಿಂಡಾ ಕಾರ್ಚಾಡೊ ಹೇಳಿದ್ದಾರೆ.

‘ದೀರ್ಘಕಾಲದಿಂದ ಈ ಮೂವರನ್ನು ಬಂಧಿಸಲಾಗಿದೆ. ಇವರ ಬಂಧನವು ಪಕ್ಷಪಾತದಿಂದ ಕೂಡಿದೆ ಹಾಗೂ ವಲಸೆ ನ್ಯಾಯಾಲಯವು ಪ್ರಕರಣದ ಕುರಿತು ತಾರತಮ್ಯ ಧೋರಣೆ ಅನುಸರಿಸಿದೆ. ಇದನ್ನು ಪ್ರತಿಭಟಿಸಿ ನನ್ನ ಕಕ್ಷಿದಾರರು ಉಪವಾಸ ಪ್ರಾರಂಭಿಸಿದರು‘ ಎಂದು ವಿವರಿಸಿದರು.

‘ಟೆಕ್ಸಾಸ್‌ನಲ್ಲಿರುವ ಅಮೆರಿಕ ವಲಸೆ ಹಾಗೂ ಕಸ್ಟಮ್‌ ಜಾರಿ (ಐಸಿಇ) ಎಜೆನ್ಸಿಯ ಬಂಧನ ಕೇಂದ್ರದಲ್ಲಿ ಈ ಮೂವರು ಜುಲೈ 9ರಿಂದ ಉಪವಾಸ ಮಾಡುತ್ತಿದ್ದರು. ಭಾನುವಾರಕ್ಕೆ ಅವರ ಉಪವಾಸವು 20ನೇ ದಿನಕ್ಕೆ ಕಾಲಿಟ್ಟಿದೆ’ ಎಂದು ಅವರು ಮಾಹಿತಿ ನೀಡಿದರು.ಹಲವು ತಿಂಗಳಿಂದ ಈ ಮೂವರು ಬಂಧನದಲ್ಲಿದ್ದಾರೆ. ಇವರಲ್ಲಿ ಒಬ್ಬರು ಒಂದು ವರ್ಷದಿಂದ ಬಂಧನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT