ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಲಾಂ ಧರ್ಮ ನಿಂದನೆ: ಕೆಲಸದಿಂದ ವಜಾ

Last Updated 10 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ದುಬೈ: ಇಸ್ಲಾಂ ಧರ್ಮದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಟೀಕೆ ಮಾಡಿದ ಕರ್ನಾಟಕ ಮೂಲದ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಕಾನೂನು ಕ್ರಮ ಎದುರಿಸಬೇಕಾದ ಸನ್ನಿವೇಶ ಬಂದಿದೆ.

ಎಮ್ರಿಲ್‌ ಸರ್ವಿಸಸ್‌ ಎಂಬ ಖಾಸಗಿ ಕಂಪನಿ ಉದ್ಯೋಗದಲ್ಲಿದ್ದ ರಾಕೇಶ್ ಬಿ. ಕಿತ್ತೂರಮಠ ಅವರು ಧರ್ಮ ನಿಂದನೆ ಆರೋಪಕ್ಕೆ ಗುರಿಯಾದವರು. ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು.ಫೇಸ್‌ಬುಕ್‌ನಲ್ಲಿ ಕೊರೊನಾ ಸೋಂಕು ಕುರಿತಾದ ಚಿತ್ರಕ್ಕೆ ಕೋಮು ಬಣ್ಣ ಬಳಿದು ಟೀಕಿಸಿರುವ ಆರೋಪಅವರ ಮೇಲಿದೆ.

‘ತಕ್ಷಣಕ್ಕೆ ಜಾರಿಗೆ ಬರುವಂತೆ ರಾಕೇಶ್‌ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಅವರು ದುಬೈನಲ್ಲಿಯೇ ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅವರು ಸಿಕ್ಕ ತಕ್ಷಣ ಪೊಲೀಸ್‌ ವಶಕ್ಕೆ ಒಪ್ಪಿಸಲಾಗುವುದು. ದ್ವೇಷದ ಅಪರಾಧಗಳನ್ನು ನಾವು ಕ್ಷಮಿಸುವುದಿಲ್ಲ’ ಎಂದು ಕಂಪನಿಯ ಸಿಇಒ ಸ್ಟುವರ್ಟ್ ಹ್ಯಾರಿಸನ್ ತಿಳಿಸಿದ್ದಾರೆ.

ಇಸ್ಲಾಂ ಧರ್ಮವನ್ನು ಅಪಹಾಸ್ಯ ಮಾಡುವ ಕಾರ್ಟೂನ್ ಅನ್ನು ಫೇಸ್‌ಬುಕ್‌ ಪುಟದಲ್ಲಿ ಹಾಕಿಕೊಂಡಿದ್ದಅಬುಧಾಬಿ ನಿವಾಸಿ ಮಿತೇಶ್‌ ಉದೇಶಿ ಎಂಬುವವರನ್ನೂ ಇತ್ತೀಚೆಗೆ ಕೆಲಸದಿಂದ ವಜಾಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT