ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಟಿ ಕವಾಯತು: ಭಾರತ, ಪಾಕಿಸ್ತಾನ ಭಾಗಿ

ಆಗಸ್ಟ್‌ 22ರಿಂದ ರಷ್ಯಾದಲ್ಲಿ ನಡೆಯಲಿರುವ ಕಾರ್ಯಕ್ರಮ
Last Updated 23 ಆಗಸ್ಟ್ 2018, 17:02 IST
ಅಕ್ಷರ ಗಾತ್ರ

ಬೀಜಿಂಗ್‌/ ಮಾಸ್ಕೊ: ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸದಸ್ಯರಾಷ್ಟ್ರಗಳಿಗೆ ನಡೆಯುತ್ತಿರುವ ಉಗ್ರ ನಿಗ್ರಹ ಜಂಟಿ ಕವಾಯತಿನಲ್ಲಿ ಭಾರತ ಮತ್ತು ಪಾಕಿಸ್ತಾನ ಇದೇ ಮೊದಲ ಬಾರಿಗೆ ಒಟ್ಟಿಗೆ ಭಾಗವಹಿಸಿದೆ.

ಭಯೋತ್ಪಾದನೆಯನ್ನು ಮಟ್ಟಹಾಕಲು ಸದಸ್ಯರಾಷ್ಟ್ರಗಳ ಸಹಕಾರ ಹೆಚ್ಚಿಸಲು ಎಸ್‌ಸಿಒ ಕವಾಯತು ಆಯೋಜಿಸಲಾಗಿದೆ.

2017ರ ಜೂನ್‌ ತಿಂಗಳಲ್ಲಿ ಎಸ್‌ಸಿಒ ಪೂರ್ಣಪ್ರಮಾಣದ ಸದಸ್ಯತ್ವವನ್ನು ಭಾರತ ಪಡೆದುಕೊಂಡಿತ್ತು.

ಶಾಂತಿಪಾಲನೆ ಕಾರ್ಯಾಚರಣೆ ಅಂಗವಾಗಿ ಎರಡು ವರ್ಷಗಳಿಗೊಮ್ಮೆ ಇಂತಹ ತರಬೇತಿ ಆಯೋಜಿಸಲಾಗಿದ್ದು, ಈ ಸಲ ಆ.22ರಿಂದ 29ರ ತನಕ ರಷ್ಯಾದ ಛೆಬಾರ್ಕುಲ್‌ನ ಕೇಂದ್ರಿಯ ಸೇನಾ ಆವರಣದಲ್ಲಿಈ ಕವಾಯತು ನಡೆಯಲಿದೆ.

ಚೀನಾ, ರಷ್ಯಾ, ಕಜಕಿಸ್ತಾನ, ತಜಕಿಸ್ತಾನ, ಕಿರ್ಗಿಸ್ತಾನ, ಭಾರತ ಹಾಗೂ ಪಾಕಿಸ್ತಾನದ 3 ಸಾವಿರ ಯೋಧರು ಕವಾಯತಿನಲ್ಲಿ ಭಾಗವಹಿಸಲಿದ್ದಾರೆ.

ಭಾರತದ ವಾಯುಸೇನೆ, ಅರೆಸೇನಾ ಪಡೆಗಳ 200ಕ್ಕೂ ಹೆಚ್ಚು ಯೋಧರು ಭಾಗವಹಿಸಲಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆ ಮತ್ತು ಅವರ ವಿರುದ್ಧ ಹೋರಾಟ ನಡೆಸುವುದು ಈ ತರಬೇತಿ ಒಳಗೊಂಡಿದೆ ಎಂದು ಭಾರತದ ರಕ್ಷಣಾ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT