ಬುಧವಾರ, ಆಗಸ್ಟ್ 21, 2019
22 °C

ಕ್ಯಾಪ್ಟನ್‌ ಸೇರಿ ನಾಲ್ವರ ಬಿಡುಗಡೆ

Published:
Updated:

ಲಂಡನ್‌ : ಕಳೆದ ತಿಂಗಳು ವಶಕ್ಕೆ ಪಡೆದುಕೊಂಡಿದ್ದ ಇರಾನ್‌ನ ತೈಲ ಟ್ಯಾಂಕರ್‌ ಹಡಗಿನ ಕ್ಯಾಪ್ಟನ್‌ ಸೇರಿದಂತೆ ಭಾರತದ ನಾಲ್ವರು ಸಿಬ್ಬಂದಿಯನ್ನು ಗಿಬ್ರಾಲ್ಟರ್‌ನ ಅಧಿಕಾರಿಗಳು ಗುರುವಾರ ಬಿಡುಗಡೆ ಮಾಡಿದ್ದಾರೆ.

ಈ ತೈಲ ಟ್ಯಾಂಕರ್‌ ಐರೋಪ್ಯ ಒಕ್ಕೂಟದ ನಿರ್ಬಂಧಗಳನ್ನು ಉಲ್ಲಂಘಿಸಿ ಸಿರಿಯಾಕ್ಕೆ ತೈಲ ಪೂರೈಸುತ್ತಿದೆ ಎಂಬ ಶಂಕೆ ಇತ್ತು.

ಈ ಕಾರಣ  ಬ್ರಿಟಿಷ್‌ ಸಾಗರ ಗಡಿಯಲ್ಲಿ ಬರುವ ಗಿಬ್ರಾಲ್ಟರ್‌ನಲ್ಲಿ ಸಮುದ್ರ ತೀರದ ಬಳಿ ವಶಪಡಿಸಿಕೊಳ್ಳಲಾಗಿತ್ತು.

ತೈಲವನ್ನು ಸಿರಿಯಾಕ್ಕೆ ಪೂರೈಸಲು ಕೊಂಡೊಯ್ಯುತ್ತಿಲ್ಲ ಎಂದು ಕ್ಯಾಪ್ಟನ್‌ ಸ್ಪಷ್ಟಪಡಿಸಿದ್ದರೂ ಪ್ರಯೋಜನವಾಗಿರಲಿಲ್ಲ. ತೈಲ ಟ್ಯಾಂಕರನ್ನು ವಶಪಡಿಸಿಕೊಳ್ಳಬೇಕು ಎಂದು ಅಮೆರಿಕ ಮನವಿ ಮಾಡಿತ್ತು.

ಆದರೆ ಗಿಬ್ರಾಲ್ಟರ್‌ ಸುಪ್ರೀಂಕೋರ್ಟ್‌ ಕೂಡ ತೈಲ ಟ್ಯಾಂಕರ್ ಹಡಗನ್ನು ವಶದಿಂದ ಮುಕ್ತಗೊಳಿಸುವಂತೆ ಆದೇಶ ನೀಡಿದೆ.

Post Comments (+)