ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್‌ನಲ್ಲಿ ಟ್ಯಾಂಕರ್‌ ಸ್ಫೋಟ: 18 ಭಾರತೀಯರ ಸಾವು

Last Updated 4 ಡಿಸೆಂಬರ್ 2019, 19:09 IST
ಅಕ್ಷರ ಗಾತ್ರ

ಖಾರ್ತೂಮ್‌: ಬಹ್ರಿ ಪ್ರದೇಶದಲ್ಲಿರುವ ಸೀಲಾ ಸೆರಾಮಿಕ್‌ ಕಾರ್ಖಾನೆಯಲ್ಲಿ ಎಲ್‌ಪಿಜಿ ಟ್ಯಾಂಕರ್‌ ಸ್ಫೋಟಗೊಂಡು ಹದಿನೆಂಟು ಭಾರತೀಯರು ಸೇರಿದಂತೆ ಇಪ್ಪತ್ಮೂರು ಮಂದಿ ಮೃತಪಟ್ಟಿದ್ದು,130 ಮಂದಿ ಗಾಯಗೊಂಡಿದ್ದಾರೆ.

ಈ ದುರಂತದಲ್ಲಿ ಭಾರತೀಯರು ಮೃತಪಟ್ಟಿರುವುದನ್ನು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಖಚಿತಪಡಿಸಿದೆ. ‘ಆದರೆ, ಇದು ಅಧಿಕೃತ ವರದಿಯಲ್ಲ. ನಾಪತ್ತೆಯಾದವರ ಹೆಸರು ಮೃತಪಟ್ಟವರ ಪಟ್ಟಿಯಲ್ಲಿರಬಹುದು. ಮೃತದೇಹ ಸಂಪೂರ್ಣ ಕರಕಲಾಗಿರುವುದರಿಂದ ಗುರುತು ಪತ್ತೆ ಕಷ್ಟವಾಗಿದೆ’ ಎಂದು ಕಚೇರಿ ತಿಳಿಸಿದೆ.

ಈ ಕಾರ್ಖಾನೆಯಲ್ಲಿ 68ಕ್ಕೂ ಹೆಚ್ಚು ಭಾರತದ ಕಾರ್ಮಿಕರಿದ್ದರು. ದುರಂತ ನಡೆದ ಸ್ಥಳದಲ್ಲಿ ಅಗ್ನಿ ಸುರಕ್ಷತಾ ಕ್ರಮ ಇಲ್ಲದಿದ್ದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸುಲಭವಾಗಿ ಬೆಂಕಿಗೆ ಆಹುತಿಯಾಗುವ ವಸ್ತುಗಳನ್ನು ಯಾವುದೇ ಸುರಕ್ಷತೆಯಿಲ್ಲದೆ ಸಂಗ್ರಹಿಸಿಟ್ಟಿದ್ದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಘಟನೆ ಬಗ್ಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT