ಇಂಡೋನೇಷ್ಯಾದಲ್ಲಿ ಪ್ರಳಯ: ಸುಮಾತ್ರಾ ದ್ವೀಪದಲ್ಲಿ 22 ಮಂದಿ ಸಾವು

7

ಇಂಡೋನೇಷ್ಯಾದಲ್ಲಿ ಪ್ರಳಯ: ಸುಮಾತ್ರಾ ದ್ವೀಪದಲ್ಲಿ 22 ಮಂದಿ ಸಾವು

Published:
Updated:

ಜಕಾರ್ತ: ಪಶ್ಚಿಮ ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಪ್ರಳಯ ಮತ್ತು ಭೂ ಕುಸಿತದಿಂದಾಗಿ ಮಕ್ಕಳು ಸೇರಿದಂತೆ 22 ಮಂದಿ ಸಾವಿಗೀಡಾಗಿದ್ದಾರೆ. 17 ಮಂದಿಗೆ ಗಂಭೀರ ಗಾಯಗಳಾಗಿವೆ. ಹಲವಾರು ಮಂದಿ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ.

ಬುಧವಾರದಿಂದ ಇಲ್ಲಿ ಭಾರೀ ಮಳೆಯಾಗಿರುವುದರಿಂದ ಜಲ ಪ್ರಳಯ ಜತೆ  ಭೂಮಿ ಕುಸಿತ ಉಂಟಾಗಿದೆ.

ಕಳೆದ ಮೂರು ದಿನಗಳಲ್ಲಿ ಉತ್ತರ ಸುಮಾತ್ರಾ ಪ್ರದೇಶದಲ್ಲಿ ಕನಿಷ್ಠ 17 ಮಂದಿ ಸಾವಿಗೀಡಾಗಿದ್ದಾರೆ ಮತ್ತು ಪಶ್ಚಿಮ ಸುಮಾತ್ರಾದಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.

ಇಲ್ಲಿನ ಮಾಂಡಯಲಿಂಗ್ ನಟಾಲ್ ಪ್ರಾಂತ್ಯದ  ಮೌರಾ ಸಲಾದಿ ಗ್ರಾಮದಲ್ಲಿರುವ ಇಸ್ಲಾಮಿಕ್ ಬೋರ್ಡಿಂಗ್ ಸ್ಕೂಲ್‍ನ 11 ಮಕ್ಕಳು ಶುಕ್ರವಾರ ಸಾವಿಗೀಡಾಗಿದ್ದಾರೆ. ಜಲ ಪ್ರಳಯಕ್ಕೆ  ಕಟ್ಟಡ ಕುಸಿದು ಈ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಸುಟೊಪೊ ಪುರ್ವೊ ನುಗ್ರೊಹೊ ಹೇಳಿದ್ದಾರೆ. ಹಲವಾರು ಮನೆಗಳು ಈ ಪ್ರಕೃತಿ ವಿಕೋಪಕ್ಕೆ ನಾಶವಾಗಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !