ಗುರುವಾರ , ನವೆಂಬರ್ 21, 2019
27 °C

ಇಂಡೊನೇಷ್ಯಾ ಅಧ್ಯಕ್ಷರಾಗಿ ವಿಡೊಡೊ ಪ್ರಮಾಣ

Published:
Updated:

ಜಕಾರ್ತ: ಇಂಡೊನೇಷ್ಯಾದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಜೊಕೊ ವಿಡೊಡೊ ಭಾನುವಾರ ಇಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷರಾಗಿ ಇದು ಅವರ ಕೊನೆಯ ಅವಧಿಯೂ ಆಗಿದೆ.

ಸರಳತೆಗೆ ಹೆಸರಾಗಿರುವ, 58 ವರ್ಷದ ವಿಡೊಡೊ, ಪ್ರಮಾಣ ವಚನ ಸಮಾರಂಭವನ್ನು ಸಹ ಸರಳವಾಗಿ ಆಯೋಜಿಸಿ ಗಮನ ಸೆಳೆದರು. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಪಥಸಂಚಲನ ಇರಲಿಲ್ಲ. ಪ್ರಮಾಣ ವಚನ ಸಮಾರಂಭಕ್ಕೆ ತೆರಳುವ ಮಾರ್ಗ ಮಧ್ಯೆ ಅವರು, ತಮ್ಮ ವಾಹನದಿಂದ ಇಳಿದು, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಬೆಂಬಲಿಗರ ಪೈಕಿ ಕೆಲವರ ಕೈಕುಲುಕಿದರು. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಜನರು ಸಹ ರಾಷ್ಟ್ರ ಧ್ವಜದೊಂದಿಗೆ ಜೈಕಾರ ಹಾಕಿದರು.

ಬಡತನ ಮೆಟ್ಟಿ ನಿಂತು, ಹೋರಾಟದ ಮೂಲಕ ಅಧ್ಯಕ್ಷ ಪದವಿಗೇರಿದ್ದ ಅವರು, ಮುಸ್ಲಿಂ ಬಾಹುಳ್ಯದ ದೇಶವನ್ನು ಆಧುನೀಕರಣಗೊಳಿಸಲು ಶ್ರಮಿಸಿದರು. ದೇಶದಲ್ಲಿ ಬೇರೂರಿದ್ದ ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದ್ದರು.

ಪ್ರತಿಕ್ರಿಯಿಸಿ (+)