ಗುರುವಾರ , ಜನವರಿ 23, 2020
28 °C

ಇಂಡೊನೇಷ್ಯಾ: ದಾಖಲೆ ಪ್ರಮಾಣದಲ್ಲಿ ಮಳೆ, ನಿಯಂತ್ರಣಕ್ಕೆ ಸಾಹಸ!

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಜಕಾರ್ತ: ಬರ ಪರಿಸ್ಥಿತಿಯನ್ನು ಎದುರಿಸಲು ಮಳೆ ಸುರಿಯುವಂತೆ ಮೋಡ ಬಿತ್ತನೆ ನಡೆಸುವುದನ್ನು ಕೇಳಿದ್ದೆವು. ಇದು, ಅದಕ್ಕೆ ವ್ಯತಿರಿಕ್ತವಾದ ಬೆಳವಣಿಗೆ. ಧಾರಾಕಾರ ಮಳೆಯಿಂದ ನಲುಗಿರುವ ಇಂಡೊನೇಷ್ಯಾ ಈಗ ಮಳೆಯನ್ನು ನಿಲ್ಲಿಸಲು ತಂತ್ರಜ್ಞಾನದ ಮೊರೆ ಹೋಗುತ್ತಿದೆ.

ಇಂಡೊನೇಷ್ಯಾದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಪ್ರವಾಹದ ಸ್ಥಿತಿ ತಲೆದೋರಿದೆ. ರಾಜಧಾನಿ ಜಕಾರ್ತಾ ಮಳೆಯಿಂದಾಗಿ ತತ್ತರಿಸಿದೆ. ಶುಕ್ರವಾರದವರೆಗೆ ಸುಮಾರು 43 ಜನ ಸತ್ತಿದ್ದಾರೆ. ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ.

ಸುಮಾತ್ರ ಮತ್ತು ಜಾವಾ ಪ್ರದೇಶಗಳ ನಡುವೆ ದಟ್ಟವಾಗಿರುವ ಮೋಡಗಳ ಮೇಲೆ ವಿಮಾನವನ್ನು ಬಳಸಿ ಸೋಡಿಯಂ ಕ್ಲೋರೈಡ್‌ ಸಿಂಪಡಿಸುವ ಮೂಲಕ ಮಳೆಯಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಲಾಗುತ್ತಿದೆ. ಈ ಉದ್ದೇಶಕ್ಕಾಗಿ ಎರಡು ಸಣ್ಣ ವಿಮಾನಗಳು
ಈಗಾಗಲೇ ಸಜ್ಜಾಗಿವೆ. ಹೆಚ್ಚುವರಿಯಾಗಿ ಅಧಿಕ ಸಾಮರ್ಥ್ಯದ ವಿಮಾನವನ್ನು ಸಜ್ಜಾಗಿ ಇರಿಸಲಾಗಿದೆ’ ಎಂದು ಇಂಡೊನೇಷ್ಯಾದ ತಾಂತ್ರಿಕ ಸಂಸ್ಥೆ ಬಿಪಿಪಿಟಿ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು