ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 91ಕ್ಕೆ ಏರಿಕೆ

7

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 91ಕ್ಕೆ ಏರಿಕೆ

Published:
Updated:

ಜಕಾರ್ತ: ಇಂಡೋನೇಷ್ಯಾದ ಲೊಂಬೊಕ್‌ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. ಕನಿಷ್ಠ 209 ಜನ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ರಿಕ್ಟರ್‌ ಮಾಪನದಲ್ಲಿ ಭೂಕಂಪದ ತೀವ್ರತೆ 7ರಷ್ಟು ದಾಖಲಾಗಿದೆ. ಸಂತ್ರಸ್ತರ ಪೈಕಿ ಹೆಚ್ಚಿನವರು ಲೊಂಬೊಕ್‌ನ ಉತ್ತರ ಭಾಗದವರು. ನೆರೆಯ ಬಾಲಿ ದ್ವೀಪದಲ್ಲೂ ಇಬ್ಬರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಸಂಜೆ ಭೂಕಂಪ ಸಂಭವಿಸಿತ್ತು.

ಭೂಕಂಪದ ತೀವ್ರತೆಗೆ ನೂರಾರು ಕಟ್ಟಡಗಳು ನೆಲಸಮವಾಗಿದ್ದು, ಸಾವಿರಾರು ಕಟ್ಟಡಗಳಿಗೆ ಹಾನಿಯಾಗಿದೆ. ಲೊಂಬೊಕ್‌ನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ತಿಳಿಸಿದೆ.

ಎರಡನೇ ಭೂಕಂಪ: ಲೊಂಬೊಕ್‌ನಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ. ಜುಲೈ 29ರಂದು ಸಂಭವಿಸಿದ್ದ ಭೂಕಂಪದಲ್ಲಿ 17 ಜನ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !