ಇಂಡೊನೇಷ್ಯಾ ಸುನಾಮಿ; ಸಾವಿನ ಸಂಖ್ಯೆ 1,649

7

ಇಂಡೊನೇಷ್ಯಾ ಸುನಾಮಿ; ಸಾವಿನ ಸಂಖ್ಯೆ 1,649

Published:
Updated:
Deccan Herald

ಪಲು: ಕಳೆದ ವಾರ ಸುನಾಮಿಗೆ ತುತ್ತಾಗಿದ್ದ ಇಂಡೊನೇಷ್ಯಾದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದ್ದು, ಅವಶೇಷಗಳಡಿ ಮತ್ತಷ್ಟು ಮೃತದೇಹಗಳು ಪತ್ತೆಯಾಗುತ್ತಿವೆ. ಸಾವಿನ ಸಂಖ್ಯೆ 1,649ಕ್ಕೆ ತಲುಪಿದೆ. 

ಕಡಲತಡಿಯ ಸುಲವೇಸಿ ನಗರದಲ್ಲಿ ನಾಪತ್ತೆಯಾಗಿದ್ದ 1,000ಕ್ಕೂ ಹೆಚ್ಚು ಮಂದಿ ಇನ್ನೂ ಸಿಕ್ಕಿಲ್ಲ. ದುರಂತ ಘಟಿಸಿ ಎಂಟು ದಿನ ಕಳೆದಿದ್ದರೂ, ಬದುಕುಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. 

ಸುನಾಮಿಯಿಂದ ಸಂಪೂರ್ಣ ನಾಶಗೊಂಡಿರುವ ಪೆಟೊಬೊ ಮತ್ತು ಬಲರೊಯ ಪ್ರದೇಶಗಳ ಅವಶೇಷಗಳ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ  ಕೊಳೆತಿರುವ ಮೃತದೇಹಗಳು ಇರಬಹುದು ಎಂದು ರಕ್ಷಣಾ ಕಾರ್ಯಕರ್ತರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಳೆತ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಹೀಗಾಗಿ ಕಾರ್ಯಕರ್ತರಿಗೆ ಮುಂಜಾಗ್ರತಾ ಕ್ರಮವಾಗಿ ಚುಚ್ಚುಮದ್ದು ನೀಡಲಾಗಿದೆ ಎಂದು ತಂಡದ ವಕ್ತಾರ ಯೂಸುಫ್ ಲತಿಫ್ ತಿಳಿಸಿದ್ದಾರೆ.  

‘ಸಾಮೂಹಿಕ ಸಮಾಧಿ ಪ್ರದೇಶ’ ಘೋಷಣೆ: ಬದುಕುಳಿದವರಿಗಾಗಿ ಶೋಧ ಮುಗಿದ ಕೂಡಲೇ ಸುನಾಮಿಯ ಭೀಕರ ಹೊಡೆತಕ್ಕೆ ಸಿಲುಕಿರುವ ಪ್ರದೇಶಗಳನ್ನು ‘ಸಾಮೂಹಿಕ ಸಮಾಧಿ’ ಸ್ಥಳಗಳೆಂದು ಘೋಷಿಸಲಾಗುವುದು ಎಂದು ಭದ್ರತಾ ಸಚಿವ ವಿರಾಂಟೊ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !