ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಇನ್‌ಸ್ಟಾಗ್ರಾಂನಲ್ಲಿ ತೊಂದರೆ: ಲಾಗಿನ್‌ ಸಮಸ್ಯೆ ಎದುರಿಸುತ್ತಿರುವ ಬಳಕೆದಾರರು

Last Updated 14 ಜೂನ್ 2019, 2:27 IST
ಅಕ್ಷರ ಗಾತ್ರ

ನವದೆಹಲಿ:ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ತೊಂದರೆ ಕಂಡುಬಂದಿದ್ದು ಕೆಲ ಬಳಕೆದಾರರು ಲಾಗಿನ್‌ ಸಮಸ್ಯೆ ಎದುರಿಸುತ್ತಿದ್ದಾರೆ.

ಈ ಬಗ್ಗೆ ವಿವಿಧ ಸಾಮಾಜಿಕ ಜಾಲತಾಣಗಳ ಬಳಕೆದಾರರು ಟ್ವಿಟರ್‌ನಲ್ಲಿ #instagramdown ಎಂದು ಹಾಕಿ ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ಹಾಸ್ಯದ ಮಿಮ್ಸ್‌ಗಳನ್ನು ಹಾಕಿದ್ದಾರೆ. ಗುರುವಾರ ಸಂಜೆಯಿಂದಇನ್‌ಸ್ಟಾಗ್ರಾಂನಲ್ಲಿ ಸಮಸ್ಯೆ ಕಂಡು ಬಂದಿದ್ದು ಲಕ್ಷಾಂತರ ಬಳಕೆದಾರರು ಲಾಗಿನ್‌ ಸಮಸ್ಯೆ ಎದುರಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಸಮಸ್ಯೆಯಾಗಿರುವುದನ್ನು ಒಪ್ಪಿಕೊಂಡಿರುವ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಒಡೆತನದ ಇನ್‌ಸ್ಟಾಗ್ರಾಂ ಕಂಪನಿಯೂ ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಟ್ವೀಟ್‌ಮಾಡಿದೆ.

ತಾಂತ್ರಿಕ ಕಾರಣಗಳಿಂದಾಗಿ ಕೆಲ ಬಳಕೆದಾರರಿಗೆ ಲಾಗಿನ್‌ನಲ್ಲಿ ಸಮಸ್ಯೆ ಎದುರಾಗಿದ್ದು ನಮ್ಮ ತಂತ್ರಜ್ಞರ ತಂಡ ಸಮಸ್ಯೆಯನ್ನು ಪರಿಸಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವುದಕ್ಕೆ ಬಳಕೆದಾರರಲ್ಲಿ ಕ್ಷಮೆಯಾಚಿಸುತ್ತೇವೆ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT