ಇನ್‌ಸ್ಟಾಗ್ರಾಂ: ನಿಂದನಾರ್ಹ ಚಿತ್ರಗಳ ಕಡಿವಾಣಕ್ಕೆ ಕೃತಕ ಬುದ್ಧಿಮತ್ತೆ

7

ಇನ್‌ಸ್ಟಾಗ್ರಾಂ: ನಿಂದನಾರ್ಹ ಚಿತ್ರಗಳ ಕಡಿವಾಣಕ್ಕೆ ಕೃತಕ ಬುದ್ಧಿಮತ್ತೆ

Published:
Updated:

ಸ್ಯಾನ್‌ಫ್ರಾನ್ಸಿಸ್ಕೊ (ಎಎಫ್‌ಪಿ): ನಿಂದನಾರ್ಹ ಚಿತ್ರಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಳ್ಳಲು ಇನ್‌ಸ್ಟಾಗ್ರಾಂ ಮುಂದಾಗಿದೆ. 

ಅಂತರ್ಜಾಲದಲ್ಲಿ ನಿಂದನೆಗೆ ಗುರಿಯಾಗುವ ಯುವಜನ, ಇವುಗಳ ವಿರುದ್ಧ ಹೋರಾಡಲು ಸಾಮಾಜಿಕ ಜಾಲತಾಣಗಳು ಸಾಕಷ್ಟು ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಅಭಿಪ್ರಾಯ ಹೊಂದಿದ್ದಾರೆ. ಸಮೀಕ್ಷೆಯೊಂದರಲ್ಲಿ ಈ ವಿಷಯ ತಿಳಿದ ಬಳಿಕ, ಈ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಸ್ಥೆ ಮುಂದಾಗಿದೆ. 

‘ನಿಂದನಾರ್ಹ ಚಿತ್ರಗಳನ್ನು ಪತ್ತೆ ಮಾಡುವ ಕೃತಕ ಬುದ್ಧಿಮತ್ತೆ, ಇವುಗಳನ್ನು ಪರಿಶೀಲಿಸುವಂತೆ ಸಿಬ್ಬಂದಿಗೆ ಸೂಚಿಸುತ್ತದೆ. ಆಗ ಇಂತಹ ಚಿತ್ರಗಳನ್ನು ಗುರುತಿಸಿ ಅವುಗಳನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ’ ಎಂದು ಇನ್‌ಸ್ಟಾಗ್ರಾಂ ಮುಖ್ಯಸ್ಥ ಆ್ಯಡಂ ಮಸೆರಿ ತಮ್ಮ ಬ್ಲಾಗ್‌ನಲ್ಲಿ ವಿವರಿಸಿದ್ದಾರೆ.  

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !