ಬಾಲಕರ ಜತೆ ಸಂಪರ್ಕಕ್ಕೆ ಗುಹೆಗೆ ಇಂಟರ್‌ನೆಟ್‌

7
ಹಂತ ಹಂತವಾಗಿ ಬಾಲಕರ ರಕ್ಷಣೆ

ಬಾಲಕರ ಜತೆ ಸಂಪರ್ಕಕ್ಕೆ ಗುಹೆಗೆ ಇಂಟರ್‌ನೆಟ್‌

Published:
Updated:
ಥಾಮ್‌ ಲುವಾಂಗ್‌ ಗುಹೆಯಲ್ಲಿ ಸಿಲುಕಿರುವ ಬಾಲಕರ ರಕ್ಷಣೆಗಾಗಿ ತೆರಳುತ್ತಿರುವ ಯೋಧರು   ಎಎಫ್‌ಪಿ ಚಿತ್ರ

ಮಾಸೈ (ಥಾಯ್ಲೆಂಡ್‌): ಪ್ರವಾಹದಿಂದ ಥಾಮ್‌ ಲುವಾಂಗ್‌ ಗುಹೆಯಲ್ಲಿ ಸಿಲುಕಿಕೊಂಡಿರುವ ಫುಟ್‌ಬಾಲ್‌ ತಂಡದ 13 ಸದಸ್ಯರನ್ನು ಸಂಪರ್ಕಿಸಲು ಇಂಟರ್‌ನೆಟ್‌ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ.

ರಕ್ಷಣಾ ತಂಡಗಳು ಇಂಟರ್‌ನೆಟ್‌ ಕೇಬಲ್‌ಗಳನ್ನು ಗುಹೆ ಒಳಗೆ ಅಳವಡಿಸುವ ಯತ್ನದಲ್ಲಿ ತೊಡಗಿದ್ದಾರೆ. ಕೇಬಲ್‌ಗಳನ್ನು ಅಳವಡಿಸಿದ ಬಳಿಕ ದೂರವಾಣಿ ಕರೆ ಮಾಡುವುದು ಸುಲಭವಾಗುತ್ತದೆ. ಪೋಷಕರು ಸಹ ಮಕ್ಕಳ ಜತೆ ಮಾತನಾಡಬಹುದು. ಇದಕ್ಕಾಗಿ ದೂರವಾಣಿ ಉಪಕರಣಗಳನ್ನು ಅಳವಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಕಕಾಲಕ್ಕೆ ಎಲ್ಲರನ್ನೂ ರಕ್ಷಿಸುವುದು ಅಸಾಧ್ಯ. ಉತ್ತಮ ಸ್ಥಿತಿಯಲ್ಲಿರುವವರನ್ನು ಮಾತ್ರ ಒಬ್ಬೊಬ್ಬರನ್ನಾಗಿ ಹೊರಗೆ ಕರೆತರಬಹುದು ಎಂದು ಚಿಯಾಂಗ್‌ ರೈ ಪ್ರಾಂತ್ಯದ ಗವರ್ನರ್‌ ನರೋಂಗ್ಸಕ್‌ ತಿಳಿಸಿದ್ದಾರೆ. ಪ್ರತಿ ದಿನ ಬಾಲಕರ ಸ್ಥಿತಿಗತಿ ಗಮನಿಸಿ ಮುಂದಿನ ಕಾರ್ಯಾಚರಣೆ ಕೈಗೊಳ್ಳಲಾಗುವುದು. ಅಪಾಯವಿದ್ದರೆ ರಕ್ಷಣಾ ಕಾರ್ಯ ಮುಂದುವರಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

**

ಬಾಲಕರ ಆರೋಗ್ಯ ಸ್ಥಿರ

ಗುಹೆಯಲ್ಲಿ ಸಿಲುಕಿದ್ದವರು ಜೀವಂತ

 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !