ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆ ತಾಲೀಮು ಸಂದರ್ಭ ಅವಘಡ: 19 ಮಂದಿ ಇರಾನ್ ಯೋಧರು ಹುತಾತ್ಮ

Last Updated 11 ಮೇ 2020, 8:17 IST
ಅಕ್ಷರ ಗಾತ್ರ

ಟೆಹರಾನ್: ಒಮನ್ ಕೊಲ್ಲಿಯಲ್ಲಿ ನಡೆಯುತ್ತಿದ್ದ ನೌಕಾಪಡೆ ಯುದ್ಧ ತಾಲೀಮು ಸಂದರ್ಭ ಉಡಾಯಿಸಿದ ಕ್ಷಿಪಣಿಯೊಂದು ಯುದ್ಧನೌಕೆಗೆ ಬಡಿದು 19 ಯೋಧರು ಹುತಾತ್ಮರಾಗಿದ್ದಾರೆ ಎಂದು ಇರಾನ್ ಸೇನೆ ತಿಳಿಸಿದೆ.

‘ಭಾನುವಾರ ಮಧ್ಯಾಹ್ನ ಜಸ್ಕ್ ಮತ್ತು ಛಾಬಹಾರ್ ಸಮುದ್ರದಲ್ಲಿ ನಡೆಯುತ್ತಿದ್ದ ತಾಲೀಮಿನಲ್ಲಿ ನೌಕಾಪಡೆಯ ಹಲವು ಹಡಗುಗಳು ಪಾಲ್ಗೊಂಡಿದ್ದವು. ಈ ವೇಳೆ ಕೊನಾರ್ಕ್ ಲಘು ಯುದ್ಧ ಹಡಗಿನಲ್ಲಿ ಅವಘಡ ಸಂಭವಿಸಿತು’ ಎಂದು ಇರಾನ್ ಸೇನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

‘ಅಪಘಾತದಲ್ಲಿ19 ಮಂದಿ ಹುತಾತ್ಮರಾಗಿದ್ದಾರೆ. 15 ಮಂದಿ ಗಾಯಗೊಂಡಿದ್ದಾರೆ’ ಎಂದು ಸೇನೆಯ ಹೇಳಿಕೆ ತಿಳಿಸಿದೆ. ಅಪಘಾತದಲ್ಲಿ ಹಡಗು ಮುಳುಗಿದೆ’ ಎಂದು ಇರಾನ್ ಸೇನೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT