ಸೋಮವಾರ, ನವೆಂಬರ್ 18, 2019
20 °C

ಭಾರತದ ಮೇಲೆ ಆತ್ಮಾಹುತಿ ದಾಳಿ ಸಂಚು ರೂಪಿಸಿದ್ದ ಐಸಿಸ್‌

Published:
Updated:

ವಾಷಿಂಗ್ಟನ್: ಅಫ್ಗಾನಿಸ್ತಾನ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಸಕ್ರಿಯವಾಗಿರುವ ಐಸಿಸ್‌ (ISIS, ಇಸ್ಲಾಮಿಕ್ ಸ್ಟೇಟ್) ಉಗ್ರರ ಸಹಯೋಗಿ ಸಂಘಟನೆ ಐಸಿಸ್–ಕೆ (ಇಸ್ಲಾಮಿಕ್ ಸ್ಟೇಟ್ ಖೊರಾಸನ್) ಕಳೆದ ವರ್ಷ ಭಾರತದ ಮೇಲೆಯೂ ಆತ್ಮಾಹುತಿ ದಾಳಿ ನಡೆಸುವ ಯೋಜನೆ ರೂಪಿಸಿತ್ತು ಎಂದು ಅಮೆರಿಕದ ಭಯೋತ್ಪಾದಕಾ ನಿಗ್ರಹ ಕೇಂದ್ರ ಮತ್ತು ಗುಪ್ತಚರ ಇಲಾಖೆಯ ನಿರ್ದೇಶಕಿ ರಸೆಲ್ ಟ್ರಾವೆರ್ಸ್‌ ಹೇಳಿದ್ದಾರೆ.

ಐಸಿಸ್‌ ಮತ್ತು ಅದರ ಎಲ್ಲ ಸಹಯೋಗಿ ಸಂಘಟನೆಗಳ ಮೇಲೆ ಅಮೆರಿಕ ಕಣ್ಣಿಟ್ಟಿದೆ. ಐಸಿಸ್‌–ಕೆಯಲ್ಲಿ ಸುಮಾರು 4,000 ಮಂದಿ ಉಗ್ರರು ಇರಬಹುದು ಎಂದು ಶಂಕಿಸಲಾಗಿದೆ ಎಂದು ಅವರು ಅಮೆರಿಕದ ಸೆನೆಟ್‌ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Explainer | ಐಎಸ್‌ ಸಂಘಟನೆ ಸ್ಥಾಪಕ ಬಾಗ್ದಾದಿ ಸಾವು: ಶಾಂತಿ ನೆಲೆಸೀತೆ ಜಗದಲ್ಲಿ?

‘ಅಫ್ಗಾನಿಸ್ತಾನದ ಹೊರಗೆ ತಮ್ಮ ಪ್ರಭಾವ ತೋರಿಸುವ ಉದ್ದೇಶದಿಂದ ದೊಡ್ಡ ಮಟ್ಟದ ದಾಳಿಗೆ ಅವರು ಯೋಜಿಸಿದ್ದರು. ಕಳೆದ ಭಾರತದ ಮೇಲೆ ಆತ್ಮಾಹುತಿ ದಾಳಿ ನಡೆಸುವ ಅವರ ಯತ್ನ ವಿಫಲವಾಯಿತು’ ಎಂದು ಹೇಳಿರುವ ಟ್ರಾವೆರ್ಸ್, ಡ್ರೋಣ್ ಡೇರಿದಂತೆ ಹಲವು ಅತ್ಯಾಧುನಿಕ ತಂತ್ರಗಳನ್ನು ಕರಗತ ಮಾಡಿಕೊಂಡಿರುವ ಐಸಿಎಸ್‌ಗೆ ವಿಶ್ವದ ವಿವಿಧೆಡೆ 20ಕ್ಕೂ ಹೆಚ್ಚು ಸಹಯೋಗ ಸಂಘಟನೆಗಳಿವೆ ಎಂದು ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳಷ್ಟೇ ಟ್ರಾವೆರ್ಸ್‌ ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಅವರಿಗೆ ಐಸಿಸ್‌–ಕೆ ಸಂಘಟನೆಯಿಂದ ಭದ್ರತೆಗೆ ಇರುವ ಬೆದರಿಕೆಗಳ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಾಗಿತ್ತು. ಅಫ್ಗಾನಿಸ್ತಾನದಲ್ಲಿರುವ ಅಮೆರಿಕ ಪಡೆಗಳನ್ನಷ್ಟೇ ಅಲ್ಲ, ಅಮೆರಿಕದಲ್ಲಿಯೂ ದಾಳಿ ನಡೆಸುವ ಉದ್ದೇಶವನ್ನು ಐಸಿಸ್‌–ಕೆ ಹೊಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.

ಐಸಿಸ್ ವಿರುದ್ಧ ಸಿರಿಯಾ ಮತ್ತು ಇರಾಕ್‌ನಲ್ಲಿ ಅಮೆರಿಕ ನಿರ್ಣಾಯಕ ಜಯಗಳಿಸಿದ್ದರೂ ಭಯೋತ್ಪಾದಕ ಸಂಘಟನೆಯು ಅಮೆರಿಕಕ್ಕೆ ಅಪಾಯ ಒಡ್ಡುವ ಭೀತಿ ಇದ್ದೇ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು... 

ಖುಷಿಪಡಬೇಡ ಅಮೆರಿಕ ಎಂದ ಐಎಸ್: ಹೊಸ ನಾಯಕನ ಘೋಷಣೆ  

ನಿಮ್ಮನ್ನು ಸುಮ್ಮನೆ ಬಿಡ್ತೀವಿ ಅಂದ್ಕೋಬೇಡಿ: ಐಎಸ್‌ ಉಗ್ರರಿಗೆ ಟ್ರಂಪ್ ಧಮಕಿ 

ಮಹಿಳೆಯರ ಜನನಾಂಗ ಛೇದನದ ಅಮಾನವೀಯ ಸಂಪ್ರದಾಯ ಹೇರಿದ್ದ ಬಾಗ್ದಾದಿ 

ಬಾಗ್ದಾದಿ ಬೆನ್ನಟ್ಟಿದ್ದ ಸೇನಾ ನಾಯಿಯ ಚಿತ್ರ ಟ್ವೀಟ್‌ ಮಾಡಿದ ಟ್ರಂಪ್ 

ಬಾಗ್ದಾದಿ ಬಗ್ಗೆ ಆಪ್ತನಿಂದ ಸಿಕ್ಕಿತ್ತು ಮಾಹಿತಿ: ಅಮೆರಿಕದಿಂದ ಯೋಜನಾಬದ್ಧ ದಾಳಿ! 

ಇಸ್ಲಾಮಿಕ್ ಸ್ಟೇಟ್‌ (ಐಎಸ್) ಉಗ್ರರ ನಾಯಕ ಅಲ್‌ ಬಾಗ್ದಾದಿ ಹತ್ಯೆ?

ಪ್ರತಿಕ್ರಿಯಿಸಿ (+)